ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಾಲರ್‌ಟ್ಯೂನ್ ಸ್ಥಗಿತಗೊಳಿಸಲು ಇಲ್ಲಿದೆ ಸುಲಭ ವಿಧಾನ

Last Updated 9 ಜೂನ್ 2020, 15:54 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾವೈರಸ್ ಹಾವಳಿ ಆರಂಭವಾದ ಬೆನ್ನಲ್ಲೇ ಭಾರತದ ಮೊಬೈಲ್‌ ಸಂಪರ್ಕ ವ್ಯವಸ್ಥೆಯಲ್ಲಿ ‘ಕೊರೊನಾ ಕಾಲರ್‌ಟ್ಯೂನ್‌’ ಹಾವಳಿ ಆರಂಭವಾಯಿತು. ಪ್ರತಿ ಭಾರಿ ಕರೆ ಮಾಡಿದಾಗಲೂ ಕೇಳಿಬರುವ ‌‘ಕೊರೊನಾ ಕಾಲರ್‌ಟ್ಯೂನ್‌’ ತಾಳ್ಮೆ ಕೆಡಿಸುವುದಂತೂ ನಿಜ. ಅಲ್ಲದೆ, ತುರ್ತು ಸಂದರ್ಭದಲ್ಲಿ ಕರೆಯೂ ಬೇಗ ಕನೆಕ್ಟ್ ಆಗುವುದಿಲ್ಲ.

ಇಷ್ಟೆಲ್ಲಾ ‘ಕಿರಿಕಿರಿ’ ಉಂಟು ಮಾಡುವ ಕೊರೊನಾ ಕಾಲರ್‌ಟ್ಯೂನ್‌ ಅನ್ನು ಸ್ಥಗಿತಗೊಳಿಸುವ ವಿಧಾನಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಧಾನಗಳು ಯಶಸ್ವಿಯಾಗಿ ಕೆಲಸ ಮಾಡುತ್ತಲೂ ಇವೆ.

ಕಾಲರ್‌ಟ್ಯೂನ್ ಸ್ಥಗಿತಗೊಳಿಸುವ ವಿಧಾನಗಳು

1. ನಿಮ್ಮ ಏರ್‌ಟೆಲ್‌ ಸಿಮ್ ಇರುವ ಸ್ಮಾರ್ಟ್‌ಫೋನ್‌ನಿಂದ*646*224#ಗೆ ಡಯಲ್ ಮಾಡಿ. ಪರದೆ ಮೇಲೆ ಗೋಚರವಾಗುವ ಯುಎಸ್‌ಎಸ್‌ಡಿ ಕೋಡ್‌ಗೆ 1 ಎಂದು ಪ್ರತ್ಯುತ್ತರ ನೀಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಕೊರೊನಾ ಕಾಲರ್‌ಟ್ಯೂನ್‌ ಶಾಶ್ವತವಾಗಿ ಸ್ಥಗಿತಗೊಳ್ಳುತ್ತದೆ. ಫೀಚರ್‌ಪೋನ್‌ಗಳಲ್ಲಿ*646*224#ಗೆ ಡಯಲ್ ಮಾಡಿದರೆ ಸಾಕು, ಕೊರೊನಾ ಕಾಲರ್‌ಟ್ಯೂನ್ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಎರಡೂ ರೀತಿಯ ಫೋನ್‌ಗಳಲ್ಲಿ ಇದನ್ನು ‘ಪ್ರಜಾವಾಣಿ’ ಪರೀಕ್ಷಿಸಿತು. ಈ ವಿಧಾನ ಶೇ 100ರಷ್ಟು ಕೆಲಸ ಮಾಡುತ್ತದೆ

2. ನಿಮ್ಮದು ವೊಡಾಫೋನ್‌ ಐಡಿಯಾ ಸಿಮ್ ಆಗಿದ್ದರೆ,ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿ ಇರುವ ಸಂಖ್ಯೆಗೆ ಡಯಲ್ ಮಾಡಿ. ಕೊರೊನಾ ಕಾಲರ್‌ಟ್ಯೂನ್ ಕೇಳಿಸುತ್ತಿದ್ದಂತೆ * ಅಥವಾ 1 ಡಯಲ್ ಮಾಡಿ. ಕಾಲರ್‌ಟ್ಯೂನ್ ಸ್ಥಗಿತಗೊಳ್ಳುತ್ತದೆ. ಈ ವಿಧಾನವನ್ನೂ ‘ಪ್ರಜಾವಾಣಿ’ ಪರೀಕ್ಷಿಸಿತು. ಇದು ಕೆಲವು ಸ್ಮಾರ್ಟ್‌ಪೋನ್‌ಗಳಲ್ಲಿ ಕೆಲಸ ಮಾಡಿತು, ಕೆಲವು ಸ್ಮಾರ್ಟ್‌ಪೋನ್‌ಗಳಲ್ಲಿ ಯಶಸ್ವಿ ಆಗಲಿಲ್ಲ

3. ನಿಮ್ಮದು ಜಿಯೊ ಸಿಮ್ ಆಗಿದ್ದರೆ, STOP ಎಂದು ಟೈಪ್‌ ಮಾಡಿ 155223ಗೆ ಎಸ್‌ಎಂಎಸ್ ಕಳುಹಿಸಿ. ಕೊರೊನಾ ಕಾಲರ್‌ಟ್ಯೂನ್ ಶಾಶ್ವತವಾಗಿ ಸ್ಥಗಿತಗೊಳ್ಳುತ್ತದೆ. ಈ ವಿಧಾನವನ್ನೂ ‘ಪ್ರಜಾವಾಣಿ’ ಪರೀಕ್ಷಿಸಿತು. ಇದು ಯಶಸ್ವಿಯಾಗಿ ಕೆಲಸ ಮಾಡುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT