ನೀವು ಎಂದಾದರೂ ಭೂಪಟದಲ್ಲಿ ಕರಾವಳಿ ರೇಖೆಯನ್ನು ನೋಡಿದಾಗ, ಅದರ ಆಕಾರ ಎಷ್ಟೆಲ್ಲಾ ಬಾಗಿದೆ ಎಂದು ಯೋಚಿಸಿದ್ದೀರಾ? ಅಂತಹ ಕರಾವಳಿಯ ಉದ್ದವನ್ನು ಅಳೆಯುವುದು ನಿಜಕ್ಕೂ ಒಂದು ಸವಾಲು. ಏಕೆಂದರೆ, ನೀವು ಕರಾವಳಿಯನ್ನು ಎಷ್ಟು ಸೂಕ್ಷ್ಮವಾಗಿ, ಎಷ್ಟು ಹತ್ತಿರದಿಂದ ನೋಡುತ್ತೀರಿ ಎನ್ನುವುದರ ಮೇಲೆ ಅದರ ಉದ್ದ ನಿರ್ಧಾರವಾಗುತ್ತದೆ!

ಇದನ್ನು ‘ಫ್ರ್ಯಾಕ್ಟಲ್’ ಎಂದು ಕರೆಯುವ ಗಣಿತದ ಪರಿಕಲ್ಪನೆಗೆ ಹೋಲಿಸಬಹುದು. ನೀವು ಹತ್ತಿರದಿಂದ ‘ಜೂಮ್’ ಮಾಡಿದಂತೆಲ್ಲಾ, ಹಿಂದೆ ಕಾಣಿಸದ ಹೊಸ ಹೊಸ ಸಣ್ಣ ಕೊಲ್ಲಿಗಳು, ಒಳಹರಿವುಗಳು ಮತ್ತು ಬಾಗಿದ ಪ್ರದೇಶಗಳು ಕಾಣಿಸಿಕೊಳ್ಳುತ್ತವೆ; ಇದರಿಂದ ಉದ್ದ ಹೆಚ್ಚಾಗುತ್ತ ಹೋಗುತ್ತದೆ.

ನಮ್ಮ ಭಾರತದ ಕರಾವಳಿ ಉದ್ದದ ಬಗ್ಗೆ ಈಗ ಇಂತಹದ್ದೇ ಒಂದು ಹೊಸ, ಆಶ್ಚರ್ಯಕರ ಮಾಹಿತಿ ಹೊರಬಿದ್ದಿದೆ! ಹಿಂದೆ, 1970ರ ದಶಕದಿಂದ ನಾವು 7,516.60 ಕಿಲೋಮೀಟರ್ ಎಂದು ನಂಬಿದ್ದ ಭಾರತದ ಅಧಿಕೃತ ಕರಾವಳಿಯ ಉದ್ದವನ್ನು ಈಗ ಮರು ಲೆಕ್ಕಾಚಾರ ಮಾಡಲಾಗಿದ್ದು, ಅದು ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿ 11,098.81 ಕಿಲೋಮೀಟರ್ಗಳಿಗೆ ಏರಿದೆ ಎಂದು ಭಾರತೀಯ ಸಮೀಕ್ಷಾ ಸಂಸ್ಥೆ (ಸರ್ವೇ ಆಫ್ ಇಂಡಿಯಾ) ಘೋಷಿಸಿದೆ.

ಈ ಬೃಹತ್ ಬದಲಾವಣೆ ಯಾಕೆ?

ಈ ಹೆಚ್ಚಳವು ದೇಶದ ಭೂಭಾಗದಲ್ಲಿ ಭೌತಿಕ ಬದಲಾವಣೆಯಿಂದ ಆಗಿಲ್ಲ; ಬದಲಿಗೆ ಆಧುನಿಕ ಅಳತೆ ವಿಧಾನಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಬಳಸಿದ್ದರಿಂದ ಆಗಿದೆ. ಕರಾವಳಿಯ ಸೂಕ್ಷ್ಮ ವಿವರಗಳನ್ನು ಈಗ ಹಿಂದೆಂದಿಗಿಂತಲೂ ಹೆಚ್ಚು ನಿಖರವಾಗಿ ಅಳೆಯಲಾಗಿದೆ. ಈ ಮಹತ್ವದ ಕಾರ್ಯದಲ್ಲಿ ಭಾರತೀಯ ಸಮೀಕ್ಷಾ ಸಂಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಮತ್ತು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ (ನ್ಯಾಷನಲ್ ಹೈಡ್ರೋಗ್ರಾಫಿಕ್ ಆರ್ಗನೈಸೇಷನ್) ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ಸಹಕರಿಸಿವೆ.

ಹೊಸ ಅಳತೆಗೆ ಕಾರಣಗಳು

ಈಗ ಕರಾವಳಿ ರೇಖೆಯನ್ನು ‘ಉಬ್ಬರವಿಳಿತದ ರೇಖೆ’ (ಹೈ–ವಾಟರ್ ಲೈನ್) ಆಧಾರದ ಮೇಲೆ ಅಳೆಯಲಾಗಿದೆ. ಇದಕ್ಕಾಗಿ 2011ರ ಎಲೆಕ್ಟ್ರಾನಿಕ್ ನ್ಯಾವಿಗೇಷನ್ ಚಾರ್ಟ್ಗಳನ್ನು (ENCs) ಬಳಸಲಾಗಿದೆ. ಹಿಂದೆ 1:4,500,000 ಅಥವಾ ಅದಕ್ಕಿಂತ ಚಿಕ್ಕ ಪ್ರಮಾಣದ ನಕ್ಷೆಗಳನ್ನು ಬಳಸಲಾಗುತ್ತಿತ್ತು. ಈಗ 1:250,000 ಎಂಬ ದೊಡ್ಡ ಪ್ರಮಾಣದ ನಕ್ಷೆಗಳನ್ನು ಬಳಸಲಾಗಿದೆ. ಈ ದೊಡ್ಡ ಪ್ರಮಾಣದ ನಕ್ಷೆಗಳು ಹಿಂದೆ ಕೈಬಿಟ್ಟಿದ್ದ ಅನೇಕ ಸಣ್ಣ ವಿವರಗಳನ್ನೂ ಸೆರೆಹಿಡಿಯಲು ಸಹಾಯ ಮಾಡಿವೆ.

ಆಧುನಿಕ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಸಾಫ್ಟ್ವೇರ್, ಲಿಡಾರ್-ಜಿ.ಪಿ.ಎಸ್. (LIDAR-GPS) ಬಳಸಿ ನಕ್ಷೆ ತಯಾರಿಸಿರುವುದಕ್ಕೆ ಹಲವೆಡೆ ಡ್ರೋನ್ ಇಮೇಜಿಂಗ್ ಮತ್ತು ಉಪಗ್ರಹದ ಬಳಕೆಯೊಂದಿಗೆ ಅಳತೆ (ಸ್ಯಾಟಲೈಟ್ ಅಲ್ಟಿಮಿಟ್ರಿ) ತಂತ್ರಜ್ಞಾನಗಳನ್ನು ಬಳಸಿದೆ. ಇದರಿಂದ ಕರಾವಳಿಯ ಅತಿ ಸೂಕ್ಷ್ಮ ವಿವರಗಳಾದ ಕೊಲ್ಲಿಗಳು, ನದೀಮುಖಗಳು, ಸಣ್ಣ ಒಳಹರಿವುಗಳು ಮತ್ತು ಇತರ ಸಣ್ಣ ಅಕ್ರಮಗಳನ್ನು ಸಹ ನಿಖರವಾಗಿ ಅಳೆಯಲು ಸಾಧ್ಯವಾಗಿದೆ. ವಿಶ್ವ ಜಿಯೋಡೇಟಿಕ್ ವ್ಯವಸ್ಥೆ 1984 (WGS84) ಎಂಬ ಜಾಗತಿಕ ವ್ಯವಸ್ಥೆಗೂ ಇದನ್ನು ಅನುಸರಿಸಲಾಗಿದೆ.

ದ್ವೀಪಗಳ ಸೇರ್ಪಡೆ

ಈ ಹೊಸ ಅಳತೆಯಲ್ಲಿ 1,298 ಕಡಲಾಚೆಯ ದ್ವೀಪಗಳು ಮತ್ತು ಸಣ್ಣ ದ್ವೀಪಗಳ (1,059 ದ್ವೀಪಗಳು ಮತ್ತು 239 ಸಣ್ಣ ದ್ವೀಪಗಳು) ಕರಾವಳಿ ಉದ್ದವನ್ನೂ ಸೇರಿಸಲಾಗಿದೆ. ಹಿಂದೆ, ಈ ದ್ವೀಪಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗಣನೆಗೆ ತೆಗೆದುಕೊಂಡಿರಲಿಲ್ಲ. ಏಕೆಂದರೆ ನಕ್ಷೆಗಳು ಚಿಕ್ಕದಾಗಿದ್ದವು ಮತ್ತು ಕೈಯಾರೆ ನಕ್ಷೆ ಮಾಡುವುದು ಕಷ್ಟವಾಗಿತ್ತು. ನದೀಮುಖಗಳು, ತೊರೆಗಳು ಮತ್ತು ಹಿನ್ನೀರಿನ ಪ್ರದೇಶಗಳನ್ನು ಅಳೆಯುವ ವಿಧಾನವನ್ನು ಪ್ರಮಾಣೀಕರಿಸಲಾಗಿದೆ. ಕಡಿಮೆ ಉಬ್ಬರವಿಳಿತದ ಸಮಯದಲ್ಲಿ ಮುಖ್ಯ ಭೂಮಿಗೆ ಸಂಪರ್ಕ ಹೊಂದಿರುವ ದ್ವೀಪಗಳ ಉದ್ದವನ್ನೂ ಈ ಅಳತೆಯಲ್ಲಿ ಸೇರಿಸಲಾಗಿದೆ.

ಈ ಸಂಪೂರ್ಣ ಪ್ರಕ್ರಿಯೆಯು 2010ರಿಂದಲೂ ಕರಾವಳಿ ರಕ್ಷಣೆ ಮತ್ತು ಅಭಿವೃದ್ಧಿ ಸಲಹಾ ಸಮಿತಿಯ (CPDAC) ಚರ್ಚೆಗೆ ಒಳಪಟ್ಟಿತ್ತು. ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯವು 2023ರ ಆಗಸ್ಟ್ನಲ್ಲಿ ಪರಿಷ್ಕೃತ ನಿಯಮಗಳನ್ನು ಅಂತಿಮಗೊಳಿಸಿ, 2024ರ ಜನವರಿಯಲ್ಲಿ ಎಲ್ಲಾ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಪ್ಪಿಗೆಯ ನಂತರ ಈ ಹೊಸ ಉದ್ದವನ್ನು ಅಂಗೀಕರಿಸಲಾಯಿತು.

ಈ ನವೀಕರಿಸಿದ ಕರಾವಳಿ ಉದ್ದವು ದೇಶದ ಹಲವು ಪ್ರಮುಖ ವಿಷಯಗಳ ಮೇಲೆ ಪರಿಣಾಮ ಬೀರಲಿದೆ. ಇದು ಕಡಲ ಭದ್ರತೆ, ಆರ್ಥಿಕ ವಲಯ ವಿಭಜನೆ, ಕರಾವಳಿ ನಿಯಂತ್ರಣ ಮತ್ತು ನಿರ್ವಹಣೆ, ಪರಿಸರ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಯೋಜನೆಗಳಿಗೆ ಬಹಳ ಮುಖ್ಯವಾಗಿದೆ. ಕರಾವಳಿಯ ಉದ್ದ ಹೆಚ್ಚಾಗಲು ಸುಧಾರಿತ ಅಳತೆ ತಂತ್ರಜ್ಞಾನಗಳೇ ಕಾರಣವಾಗಿದ್ದು, ಭಾರತದ ವಿಶಾಲ ಕರಾವಳಿ ಪ್ರದೇಶಗಳ ಪರಿಣಾಮಕಾರಿ ಯೋಜನೆ ಮತ್ತು ಸಮರ್ಥನೀಯ ನಿರ್ವಹಣೆಗೆ ನಿಖರ ಭೌಗೋಳಿಕ ದತ್ತಾಂಶ ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ. ಇನ್ನು ಮುಂದೆ, ಭಾರತದ ಕರಾವಳಿ ಉದ್ದವನ್ನು ಪ್ರತಿ 10 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುವುದು.

ಫ್ರ್ಯಾಕ್ಟಲ್ ರೀತಿಯಲ್ಲಿ ಸಮುದ್ರತೀರದ ಪ್ರತಿಯೊಂದು ಮರಳಿನ ಕಣಗಳನ್ನು ಜೋಡಿಸುತ್ತ, ಅಳೆಯುತ್ತ ಹೋದರೆ, ಅದು ಅಪರಿಮಿತ ಎಣಿಕೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.