ಮಂಗಳವಾರ, ಜುಲೈ 5, 2022
26 °C

ದೇಶದ ಮಾರುಕಟ್ಟೆಗೆ ಶಓಮಿ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಯ ಪ್ರಮುಖ ಸಂಸ್ಥೆ ಶಓಮಿ, ರೆಡ್ಮಿ ಬ್ರ್ಯಾಂಡ್ ಮೂಲಕ ಎರಡು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ರೆಡ್ಮಿ 10ಎ ಮತ್ತು ರೆಡ್ಮಿ 10 ಪವರ್ ಎಂಬ ಎರಡು ಮಾದರಿಗಳು ಬಿಡುಗಡೆಯಾಗಿವೆ ಎಂದು ಕಂಪನಿ ಹೇಳಿದೆ.

ರೆಡ್ಮಿ 10 ಪವರ್
6.71 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಫಿಂಗರ್‌ಪ್ರಿಂಟ್ ಲಾಕ್, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಒಕ್ಟಾ ಕೋರ್ ಪ್ರೊಸೆಸರ್, 8 GB RAM ಮತ್ತು 128 GB ಸ್ಟೋರೇಜ್ ಇದರಲ್ಲಿದೆ.
50 ಮೆಗಾಪಿಕ್ಸೆಲ್ ಜತೆಗೆ 2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫಿ ಹಾಗೂ 6,000mAh ಬ್ಯಾಟರಿ ಜತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ.
ಪವರ್ ಬ್ಲ್ಯಾಕ್ ಮತ್ತು ಸ್ಪೋರ್ಟ್ ಆರೆಂಜ್ ಬಣ್ಣಗಳಲ್ಲಿ ಹೊಸ ಫೋನ್ ದೊರೆಯಲಿದ್ದು, ₹14,999 ದರವಿದೆ.

ರೆಡ್ಮಿ 10ಎ
ರೆಡ್ಮಿ 10ಎ ಸ್ಮಾರ್ಟ್‌ಫೋನ್ 6.53 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಜತೆಗೆ ಮೀಡಿಯಾಟೆಕ್ ಹೆಲಿಯೊ ಜಿ25 ಪ್ರೊಸೆಸರ್, 3 GB/4 GB RAM ಹಾಗೂ 32 GB/64 GB ಸ್ಟೋರೇಜ್ ಹೊಂದಿದೆ.
ಬೆಲೆ ₹8,499 ಮತ್ತು ₹9,499 ಅನುಕ್ರಮವಾಗಿ ದರ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು