ಬುಧವಾರ, ಫೆಬ್ರವರಿ 19, 2020
28 °C

ರೆಡ್‌ಮಿ 8ಎ ಡ್ಯೂಯಲ್‌ ಫೋನ್‌ ಬಿಡುಗಡೆ: ಆರಂಭಿಕ ಬೆಲೆ ₹6,499 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಶಿಯೋಮಿ ರೆಡ್‌ಮಿ 8ಎ ಡ್ಯೂಯಲ್‌ ಸ್ಮಾರ್ಟ್‌ಫೋನ್‌

ಪ್ರೀಮಿಯಂ ಮತ್ತು ಅಧಿಕ ಸಾಮರ್ಥ್ಯದ ಫೋನ್‌ಗಳ ಜೊತೆಗೆ ಬಜೆಟ್‌ ಫೋನ್‌ಗಳ ಕಡೆಗೂ ಗಮನ ಮುಂದುವರಿಸಿರುವ ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಶಿಯೋಮಿ, ಮಂಗಳವಾರ 'ರೆಡ್‌ಮಿ 8ಎ ಡ್ಯೂಯಲ್‌' ಹೊಸ ಫೋನ್‌ ಬಿಡುಗಡೆ ಮಾಡಿದೆ.

ಡ್ಯೂಯಲ್‌ ಸಿಮ್‌ ಮತ್ತು ಡ್ಯೂಯಲ್‌ ಕ್ಯಾಮೆರಾ ಒಳಗೊಂಡಿರುವ ರೆಡ್‌ಮಿ 8ಎ ಡ್ಯೂಯಲ್‌; 2 ಜಿಬಿ ರ್‍ಯಾಮ್‌ ಮತ್ತು 3 ಜಿಬಿ ರ್‍ಯಾಮ್‌ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ. 32 ಜಿಬಿ ಸಂಗ್ರಹ ಸಾಮರ್ಥ್ಯವಿರುವ ಫೋನ್‌ನ ಆರಂಭಿಕ ಬೆಲೆ ₹6,499 ನಿಗದಿಯಾಗಿದೆ. 

ಸ್ಕೈ ವೈಟ್‌, ಸೀ ಬ್ಲೂ ಹಾಗೂ ಮಿಡ್‌ನೈಟ್‌ ಗ್ರೇ ಬಣ್ಣಗಳಲ್ಲಿ ಲಭ್ಯವಿರುವ ರೆಡ್‌ಮಿ 8ಎ ಡ್ಯೂಯಲ್‌, ಫೆಬ್ರುವರಿ 18ರಿಂದ ಎಂಐ ಸ್ಟೋರ್‌, ಅಧಿಕೃತ ವೆಬ್‌ಸೈಟ್‌ ಹಾಗೂ ಅಮೆಜಾನ್‌ನಲ್ಲಿ ಖರೀದಿಗೆ ಸಿಗಲಿದೆ. 

6.2 ಇಂಚು ಎಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇ, ಗೊರಿಲ್ಲ ಗ್ಲಾಸ್‌ 5 ಪ್ರೊಟೆಕ್ಷನ್‌ ಹಾಗೂ ಪಿ2ಐ ನ್ಯಾನೊ ಕೋಟಿಂಗ್‌ ಇರುವುದರಿಂದ ಸ್ಪ್ಲ್ಯಾಷ್‌ ಪ್ರೂಫ್‌ ಸಹ ಆಗಿದೆ. ಇನ್ನು ಹಿಂಬದಿಯಲ್ಲಿ 13 ಎಂಪಿ ಮತ್ತು 2 ಎಂಪಿ ಎರಡು ಕ್ಯಾಮೆರಾಗಳು, ಇಂಟಿಗ್ರೇಟೆಡ್‌ ಗೂಗಲ್‌ ಲೆನ್ಸ್‌ ಒಳಗೊಂಡಿದೆ. ಸೆಲ್ಫಿಗಾಗಿ 8 ಎಂಪಿ ಕ್ಯಾಮೆರಾ ನೀಡಲಾಗಿದೆ.

ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ 439 ಪ್ರೊಸೆಸರ್‌, ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 512 ಜಿಬಿ ವರೆಗೂ ಸಂಗ್ರಹ ಸಾಮರ್ಥ್ಯ ವಿಸ್ತರಿಸುವ ಅವಕಾಶ, 5000 ಎಂಎಎಚ್‌ ಬ್ಯಾಟರಿ ಮತ್ತು 18ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಹಾಗೂ ಯುಎಸ್‌ಬಿ ಟೈಪ್‌–ಸಿ ಪೋರ್ಟ್‌ ನೀಡಲಾಗಿದೆ. 

ರೆಡ್‌ಮಿ 8ಎ ಮತ್ತು 8ಎ ಡ್ಯೂಯಲ್‌ ವ್ಯತ್ಯಾಸ 

2019ರ ಸೆಪ್ಟೆಂಬರ್‌ನಲ್ಲಿ ಶಿಯೋಮಿ ರೆಡ್‌ಮಿ 8ಎ ಬಿಡುಗಡೆಯಾಗಿದೆ. 2 ಜಿಬಿ ಮತ್ತು 3 ಜಿಬಿ ರ್‍ಯಾಮ್‌ ಎರಡೂ ಮಾದರಿಗಳಲ್ಲಿ ಲಭ್ಯವಿದ್ದು, 32 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಬ್ಯಾಟರಿ ಸಾಮರ್ಥ್ಯದಲ್ಲೂ ಸಹ 8ಎ ಮತ್ತು 8ಎ ಡ್ಯೂಯಲ್‌ನಲ್ಲಿ ವ್ಯತ್ಯಾಸವಿಲ್ಲ. ಆದರೆ, ಹಿಂಬದಿಯಲ್ಲಿ 12 ಎಂಪಿ ಸೋನಿಐಎಂಎಕ್ಸ್‌363 ಒಂದೇ ಕ್ಯಾಮೆರಾ ನೀಡಲಾಗಿತ್ತು. ಸೆಲ್ಫಿ ಕ್ಯಾಮೆರಾದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರೊಸೆಸರ್‌ ಸ್ನ್ಯಾಪ್‌ಡ್ರ್ಯಾಗನ್‌ 430 ಆಕ್ಟಾ–ಕೋರ್‌ ಬಳಸಲಾಗಿತ್ತು; ಹೊಸ ಫೋನ್‌ನಲ್ಲಿ '439' ನೀಡಲಾಗಿದೆ.

'ರೆಡ್‌ಮಿ 8ಎ' ಏನೆಲ್ಲ ಇದೆ?

* 13 ಎಂಪಿ + 2 ಎಂಪಿ ಕ್ಯಾಮೆರಾ, 8 ಎಂಪಿ ಸೆಲ್ಫಿ ಕ್ಯಾಮೆರಾ

* 5000 ಎಂಎಎಚ್‌ ಬ್ಯಾಟರಿ

* 6.22 ಇಂಚು ಎಚ್‌ಡಿ+ ಡಿಸ್‌ಪ್ಲೇ

* ಆಕ್ಟಾ–ಕೋರ್‌ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ 439 ಪ್ರೊಸೆಸರ್‌

ಬೆಲೆ

* 2 ಜಿಬಿ ರ್‍ಯಾಮ್‌/ 32 ಜಿಬಿ ಸಂಗ್ರಹ ಸಾಮರ್ಥ್ಯ – ₹6,499

* 3 ಜಿಬಿ ರ್‍ಯಾಮ್‌/ 32 ಜಿಬಿ ಸಂಗ್ರಹ ಸಾಮರ್ಥ್ಯ – ₹6,999

20000 ಎಂಎಎಚ್‌ ಪವರ್‌ ಬ್ಯಾಂಕ್‌

ರೆಡ್‌ಮಿ 8ಎ ಡ್ಯೂಯಲ್‌ ಜೊತೆಗೆ ಎರಡು ಹೊಸ ಪವರ್‌ ಬ್ಯಾಂಕ್‌ಗಳನ್ನು ಬಿಡುಗಡೆ ಮಾಡಲಾಗಿದೆ. 10,000 ಎಂಎಎಚ್‌ ಮತ್ತು 20,000 ಎಂಎಎಚ್‌ ಪವರ್‌ಬ್ಯಾಂಕ್‌ ಬಿಡುಗಡೆಯಾಗಿದ್ದು, ಅತ್ಯಾಧುನಿಕ 9 ಲೇಯರ್‌ ಸರ್ಕ್ಯೂಟ್‌ ಚಿಪ್‌ ಪ್ರೊಟೆಕ್ಷನ್‌, ಲಿಥಿಯಮ್‌ ಪಾಲಿಮರ್‌ ಬ್ಯಾಟರಿ, ಡ್ಯೂಯಲ್‌ ಯುಎಸ್‌ಬಿ ಔಟ್‌ಪುಟ್‌ (ಮೈಕ್ರೊ ಯುಎಸ್‌ಬಿ ಮತ್ತು ಟೈಪ್‌ ಸಿ) , ಜಾರಿ ಬೀಳದಂತೆ ತಡೆಯುವ ವಿನ್ಯಾಸ ಹೊಂದಿದೆ. 

10,000 ಎಂಎಎಚ್‌– 10 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌: ಬೆಲೆ ₹799

20,000 ಎಂಎಎಚ್‌– 20 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌: ಬೆಲೆ ₹1,499

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು