ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ತಗುಲಲು ಕಾರಣವಾದ ಜೀನ್‌ ರೂಪಾಂತರ ಪತ್ತೆ

ನೆದರ್ಲೆಂಡ್ಸ್‌ನ ರ‍್ಯಾಡ್‌ಬೌಡ್‌ ಯೂನಿವರ್ಸಿಟಿ ಮೆಡಿಕಲ್‌ ಸೆಂಟರ್‌ ವಿಜ್ಞಾನಿಗಳ ಸಾಧನೆ
Last Updated 26 ಜುಲೈ 2020, 10:52 IST
ಅಕ್ಷರ ಗಾತ್ರ

ಲಂಡನ್‌: ಕೆಲವರು ಸುಲಭವಾಗಿ ಕೊರೊನಾ ಸೋಂಕಿಗೆ ಒಳಗಾಗಲುಮನುಷ್ಯನ ವಂಶವಾಹಿಗಳಲ್ಲಿನ (ಜೀನ್‌) ರೂಪಾಂತರವೇ ಕಾರಣಎಂಬುದನ್ನು ನೆದರ್ಲೆಂಡ್ಸ್‌ನ ರ‍್ಯಾಡ್‌ಬೌಡ್‌ ಯೂನಿವರ್ಸಿಟಿ ಮೆಡಿಕಲ್‌ ಸೆಂಟರ್‌ನ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಕೋವಿಡ್‌ ವಿರುದ್ಧ ಹೋರಾಡಲು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಪರಿಣಾಮಕಾರಿ ಔಷಧ ಕಂಡುಹಿಡಿಯಲು ಈ ಸಂಶೋಧನೆ ಮತ್ತಷ್ಟು ನೆರವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಜರ್ನಲ್‌ ಆಫ್‌ ದಿ ಅಮೆರಿಕನ್ ಮೆಡಿಕಲ್‌ ಅಸೋಸಿಯೇಶನ್‌’ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.

ಅಧ್ಯಯನಕ್ಕೆ ಆಯ್ಕೆಯಾಗಿದ್ದ ಕೋವಿಡ್‌ ರೋಗಿಗಳ ಪೈಕಿ ಕೆಲವರಲ್ಲಿ ‘ಟಿಎಲ್‌ಆರ್‌7’ ಎಂಬ ಜೀನ್‌ಗಳು‌ ಭಿನ್ನವಾಗಿರುವುದು ಪತ್ತೆಯಾಯಿತು. ಈ ಕಾರಣದಿಂದಾಗಿಯೇ ಆ ನಿರ್ದಿಷ್ಟ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿಗೆ ಕಾರಣವಾದ ಅಣುಗಳ ಸೃಷ್ಟಿಯಲ್ಲಿ ತೊಂದರೆ ಕಂಡುಬಂದಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಟಿಎಲ್‌ಆರ್‌7’ ಜೀನ್‌ಗಳು ಮನುಷ್ಯರ ಜೀವಕೋಶಗಳ ಮೇಲ್ಪದರದಲ್ಲಿ ಇರುತ್ತವೆ. ಜೀವಕೋಶಗಳ ಮೇಲೆ ದಾಳಿ ನಡೆಸುವ ಬ್ಯಾಕ್ಟೀರಿಯಾ ಅಥವಾ ವೈರಸ್‌ನಂತಹ ರೋಗಕಾರಕಗಳನ್ನು ಈ ಜೀನ್‌ಗಳು ಗುರುತಿಸಿ, ಕೂಡಲೇ ದೇಹದ ರೋಗ ನಿರೋಧಕ ಶಕ್ತಿ ಕ್ರಿಯಾಶೀಲವಾಗುವಂತೆ ಮಾಡುತ್ತವೆ.

ಜೀನ್‌ಗಳು ರೂಪಾಂತರಗೊಂಡಾಗ ಅವುಗಳಲ್ಲಿ ಈ ರೋಗಕಾರಕಗಳನ್ನು ಗುರುತಿಸುವ ಶಕ್ತಿಯೂ ಕುಂದಿ, ದೇಹ ಸುಲಭವಾಗಿ ಕೊರೊನಾ ಸೋಂಕಿಗೆ ತುತ್ತಾಗುತ್ತದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT