7

ಐಲೈಫ್‌: ಅಗ್ಗದ ನೋಟ್‌ಬುಕ್‌ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಅಮೆರಿಕದ ಕಂಪ್ಯೂಟರ್‌ ತಯಾರಿಕಾ ಸಂಸ್ಥೆ ಐ–ಲೈಫ್‌, ಭಾರತದ ಮಾರುಕಟ್ಟೆಗೆ ಅಗ್ಗದ ನೋಟ್‌ಬುಕ್‌ಗಳನ್ನು ಪರಿಚಯಿಸಿದೆ.

ಜೆಇಡಿ ಶ್ರೇಣಿಯಲ್ಲಿ ಮೂರು ಉತ್ಪನ್ನಗಳನ್ನು ಆನ್‌ಲೈನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೇರ್ಪಡಿಸಬಹುದಾದ ಲ್ಯಾಪ್‌ಟಾಪ್‌ ಜೆಡ್‌ಬುಕ್‌ 2 ಇನ್‌ 1, ಜೆಡ್‌  ಏರ್‌ ಲ್ಯಾಪ್‌ಟಾಪ್‌ ಮತ್ತು ಅಲ್ಟ್ರಾ ಸ್ಲಿಮ್‌ ಜೆಡ್‌ ಏರ್‌ ಪ್ರೊಗಳನ್ನು ಪರಿಚಯಿಸಿದೆ. ಇವುಗಳ ಮಾರಾಟಕ್ಕೆ ಸಂಸ್ಥೆಯು ಇ–ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಜತೆ ಒಪ್ಪಂದ ಮಾಡಿಕೊಂಡಿದೆ.

‘ಅಗ್ಗದ ದರದಲ್ಲಿ ಲಭ್ಯ ಇರುವ ಈ ಲ್ಯಾಪ್‌ಟಾಪ್‌ಗಳು ಶೈಕ್ಷಣಿಕ ಉದ್ದೇಶದ ಬಳಕೆಗೆ ಹೆಚ್ಚು ಉಪಯುಕ್ತವಾಗಿರಲಿವೆ’ ಎಂದು ಸಂಸ್ಥೆಯ ಜಾಗತಿಕ ವಹಿವಾಟಿನ ನಿರ್ದೇಶಕ ದೀಪಕ್‌ ಭಾಟಿಯಾ ಹೇಳಿದ್ದಾರೆ.

‘ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಇದೇ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಜೆಡ್‌ ಏರ್‌ ಪ್ರೊ (ಅಲ್ಟ್ರಾ ಸ್ಲಿಮ್‌) ನೋಟ್‌ಬುಕ್‌, ಈ ಶ್ರೇಣಿಯ ಉತ್ಪನ್ನಗಳಲ್ಲಿ ಹೆಚ್ಚು (1.16 ಕೆ.ಜಿ) ಹಗುರವಾಗಿದೆ. ಈ ಉತ್ಪನ್ನಗಳ ಬೆಲೆ ₹ 9,999 ರಿಂದ ₹ 12,990ವರೆಗೆ ಇದೆ.

‘ಮೊದಲ ಹಂತದಲ್ಲಿ ಫ್ಲಿ‍ಪ್‌ಕಾರ್ಟ್‌ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯ ಇರಲಿದೆ. ಆನಂತರ ಕ್ರಮೇಣ ರಿಟೇಲ್‌ ವಹಿವಾಟಿಗೆ ಗಮನ ನೀಡಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಮಾರಾಟಕ್ಕೆ ಆದ್ಯತೆ ನೀಡಲಾಗುವುದು. ಈ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ತಯಾರಿಸಲೂ ಸಂಸ್ಥೆ  ಉದ್ದೇಶಿಸಿದೆ’ ಎಂದು ಹೇಳಿದ್ದಾರೆ.

ಪೋರ್ಟೆಬಲ್‌ ಆಲ್‌ ಇನ್‌ ಒನ್‌ ಲ್ಯಾಪ್‌ಟಾಪ್‌ ವಿಶಿಷ್ಟ ಉತ್ಪನ್ನವಾಗಿದ್ದು, ದೀಪಾವಳಿ ಸಂದರ್ಭದಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಸಂಸ್ಥೆ ನಿರ್ಧರಿಸಿದೆ.

 

 

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !