ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರೆ ಪರೀಕ್ಷೆಗೆ ‘ಸೆನ್ಸರ್‌’

Last Updated 22 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಅಭಿವೃದ್ಧಿಯ ಬೆನ್ನುಬಿದ್ದಿರುವ ಮಾನವ ವಿಷ ಸೂಸುವ ಬೃಹತ್‌ ಕಾರ್ಖಾನೆಗಳು ಒಂದೆಡೆ ಸ್ಥಾಪಿ ಸುತ್ತಿದ್ದಾನೆ. ಮತ್ತೊಂದೆಡೆ ಅರಣ್ಯ ಪ್ರದೇಶ ದಿನ ದಿಂದ ದಿನಕ್ಕೆ ಕಿರಿದಾಗುತ್ತದೆ. ಇದರಿಂದ ಹವಾಮಾನದಲ್ಲಿ ವೈಪರೀತ್ಯ ವಾಗುತ್ತಿದೆ. ಈ ಎಲ್ಲ ಪಲ್ಲಟಗಳ ನಡುವೆ ಮನುಷ್ಯ ಬದುಕುಳಿಯಲು ಅವಶ್ಯವಾದ ಗಾಳಿಯನ್ನು ಮರೆಯುತ್ತಿದ್ದಾನೆ.

ಆಮ್ಲಜನಕ ಎಲ್ಲಿಂದ ಉತ್ಪತ್ತಿಯಾಗುತ್ತದೆ ಎಂಬ ಪ್ರಶ್ನೆ ಕೇಳಿಕೊಳ್ಳುವ ಮಟ್ಟವನ್ನು ಮನುಷ್ಯ ಮೀರಿದ್ದಾನೆ. ನಾವು ಸೇವಿಸುವ ಗಾಳಿ, ನೀರು ನಮ್ಮ ಜೀವಿತಾವಧಿಯನ್ನು ನಿರ್ಧರಿಸುತ್ತವೆ ಎಂಬುದು ನಮಗೆ ಅರ್ಥವಾಗುವುದು ಯಾವಾಗ? ಜನರ ವಿವೇಚನೆಯ ಮಟ್ಟ ಕೆಳಕ್ಕಿಳಿದಿದೆ. ಪರಿಸರಕ್ಕೆ ಮಾಡಿರುವ ಹಾನಿಯ ಫಲವನ್ನು ವಿವಿಧ ರೋಗಗಳ ರೂಪದಲ್ಲಿ ಅನುಭವಿಸುತ್ತಿ ದ್ದೇವೆ. ಈಗ ಮನುಷ್ಯನನ್ನು ಬಾಧಿಸುತ್ತಿರುವ ಹಲವು ರೋಗಗಳ ಪತ್ತೆ ಹಚ್ಚಲು ಹಲವು ನೂತನ ಸಾಧನಗಳನ್ನು ಪತ್ತೆಹಚ್ಚಲಾಗುತ್ತಿದೆ. ಅವುಗಳಲ್ಲಿ ಗ್ಯಾಸ್‌ ಸೆನ್ಸರ್‌ ಸಹ ಒಂದು.

ಉಸಿರಾಡುವ ಗಾಳಿಯ ಗುಣಮಟ್ಟ ಮತ್ತು ಪ್ರಜ್ಞೆಯ ಮಟ್ಟವನ್ನು ಪತ್ತೆ ಹಚ್ಚುವ ಸಲುವಾಗಿ ಅತ್ಯಂತ ಸೂಕ್ಷ್ಮ ಗ್ಯಾಸ್ ಸೆನ್ಸರ್‌ ಅನ್ನು ವಿಜ್ಞಾನಿ ಗಳು ಅಭಿವೃದ್ಧಿ ಪಡಿಸಿದ್ದಾರೆ. ಫಿನ್‌ಲ್ಯಾಂಡ್‌ನ ವಿಟಿಟಿ ತಾಂತ್ರಿಕ ಸಂಶೋಧನಾ ಕೇಂದ್ರ ಈ ಸೆನ್ಸರ್‌ ಅಭಿವೃದ್ಧಿಪಡಿಸಿದ್ದು, ಇದನ್ನು ಸ್ಮಾರ್ಟ್‌ ಫೋನ್‌ಗೂ ಸಂಪರ್ಕಿಸಬಹುದಂತೆ.

ಇದರಿಂದ ಉಸಿರಾಟದ ತೊಂದರೆಗಳನ್ನು ಪತ್ತೆಹಚ್ಚಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ. ಇದರ ಜೊತೆಗೆ ಮೊಬೈಲ್‌ ಹೆಲ್ತ್‌ ಕೇರ್‌ ಆ್ಯಪ್‌ ಸಹಾಯದಿಂದ ನಿದ್ರೆಯ ಗುಣಮಟ್ಟ ಪತ್ತೆ ಹಚ್ಚುವುದರ ಜೊತೆಗೆ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣವನ್ನು ಪತ್ತೆಹಚ್ಚಬಹುದು.

ಸೆನ್ಸರ್‌ ಅಭಿವೃದ್ಧಿಪಡಿಸುವ ಬಹುತೇಕರು ಸ್ಮಾರ್ಟ್‌ಫೋನ್‌ ಮೂಲಕ ಗಾಳಿಯಲ್ಲಿರುವ ಕಾರ್ನನ್‌ ಡೈ ಆಕ್ಸೈಡ್‌, ಆಮ್ಲಜನಕ ಪ್ರಮಾಣ ವನ್ನು ಪತ್ತೆಹಚ್ಚಲು ಇಚ್ಛಿಸುತ್ತಾರೆ. ‘ತಾಂತ್ರಿಕ ಕ್ಷೇತ್ರದಲ್ಲಾಗಿರುವ ಕ್ರಾಂತಿಯಿಂದ ಪರಿಸರ ದಲ್ಲಾಗುವ ಬದಲಾವಣೆಗಳನ್ನು ವಿವಿಧ ಸೆನ್ಸರ್‌ ಗಳ ಮೂಲಕ ಪತ್ತೆಹಚ್ಚಬಹುದು ಎಂಬುದು ಇದಕ್ಕೆ ಕಾರಣವಿರಬಹುದು ಎನ್ನುತ್ತಾರೆ ವಿಟಿಟಿ ತಂಡದ ಪ್ರಮುಖರಾದ ಅನ್ನಾ ರಿಸ್ಸಾನೆನ್‌. ಕಾರ್ಬನ್‌ ಡೈ ಆಕ್ಸೈಡ್‌ ಮಟ್ಟ ಮತ್ತು ಆಂತರಿಕ ಗಾಳಿಯ ಗುಣಮಟ್ಟದ ಮೇಲೆ ಕೆಲಸದ ದಕ್ಷತೆ ನಿರ್ಧಾರವಾಗುತ್ತದೆ ಎನ್ನುತ್ತಾರೆ ರಿಸ್ಸಾನೆನ್‌.

ನ್ಯಾನೊ ಸ್ಯಾಟಲೈಟ್‌ಗೆ ಅತ್ಯುತ್ತಮ ಗುಣ ಮಟ್ಟದ ಕ್ಯಾಮೆರಾ, ಡ್ರೋನ್‌ ಆಧಾರಿತ ಪರಿಸರ ಸಂಬಂಧಿ ಸಾಧನಾ, ಆರಂಭದಲ್ಲೇ ಚರ್ಮ ಕ್ಯಾನ್ಸರ್‌ ಪತ್ತೆ ಮತ್ತು ವಾಹನಗಳು ಹೊರ ಸೂಸುವ ವಿಷಕಾರಿ ಗಾಳಿ ಕಡಿಮೆ ಮಾಡಲು ಪೆಟ್ರೋಲ್‌, ಡೀಸೆಲ್‌ ವಿಶ್ಲೇಷಣೆ ಮಾಡುವ ಸಾಧನಗಳನ್ನು ವಿಟಿಟಿ ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT