ಎದೆಗೆ ಚೂರಿ ಇರಿದು ಹತ್ಯೆ

ಬುಧವಾರ, ಏಪ್ರಿಲ್ 24, 2019
24 °C

ಎದೆಗೆ ಚೂರಿ ಇರಿದು ಹತ್ಯೆ

Published:
Updated:
Prajavani

ಬೆಂಗಳೂರು: ಐದು ದಿನಗಳ ಹಿಂದಷ್ಟೇ ಜಾಮಿನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಆರ್.ಭರತ್ (20) ಎಂಬಾತನನ್ನು, ದುಷ್ಕರ್ಮಿಗಳು ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಹನುಮಂತನಗರ ಸಮೀಪದ ಕಾಳಿದಾಸ ಲೇಔಟ್‌ನಲ್ಲಿ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಯುವಕರಿಬ್ಬರು, ಸ್ನೇಹಿತರ ಭೇಟಿಗೆ ತೆರಳುತ್ತಿದ್ದ ಭರತ್‌ನನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಭರತ್‌ನನ್ನು ಆನೇಕಲ್ ಪೊಲೀಸರು ತಿಂಗಳ ಹಿಂದೆ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಏ.7ರಂದು ಆತ ಬಿಡುಗಡೆಯಾಗಿದ್ದ. ಹಂತಕರ ಬಗ್ಗೆ ಸುಳಿವು ಸಿಕ್ಕಿದೆ’ ಎಂದು ಹನುಮಂತನಗರ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !