ಬೈಕ್ ಗುದ್ದಿಸಿ ಶಿಕ್ಷಕಿಯ ಬ್ಯಾಗ್ ದೋಚಿದರು

7

ಬೈಕ್ ಗುದ್ದಿಸಿ ಶಿಕ್ಷಕಿಯ ಬ್ಯಾಗ್ ದೋಚಿದರು

Published:
Updated:

ಬೆಂಗಳೂರು: ಸ್ಕೂಟರ್‌ಗೆ ಬೈಕ್ ಗುದ್ದಿಸಿ ಜಗದೇಶ್ವರಿ ಎಂಬುವರನ್ನು ಕೆಳಗೆ ಬೀಳಿಸಿದ ದುಷ್ಕರ್ಮಿಗಳು, ₹ 7 ಸಾವಿರ ನಗದು ಹಾಗೂ ಕೆಲ ದಾಖಲೆಗಳಿದ್ದ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾರೆ.

ಹೊರಮಾವು ಮುಖ್ಯರಸ್ತೆಯಲ್ಲಿ ಗುರುವಾರ ಸಂಜೆ ಘಟನೆ ನಡೆದಿದ್ದು, ಈ ಸಂಬಂಧ ಮಾರಗೊಂಡನಹಳ್ಳಿ ನಿವಾಸಿಯಾದ ಜಗದೇಶ್ವರಿ ರಾಮಮೂರ್ತಿನಗರ ಠಾಣೆಗೆ ದೂರು ಕೊಟ್ಟಿದ್ದಾರೆ.

ಶಿಕ್ಷಕಿಯಾದ ಅವರು, 6.30ರ ಸುಮಾರಿಗೆ ಶಾಲೆಯಿಂದ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದರು. ರಾಘವೇಂದ್ರ ವೃತ್ತದಿಂದ ಹೊರಮಾವು ಮುಖ್ಯರಸ್ತೆಗೆ ತಿರುವು ಪಡೆದುಕೊಳ್ಳುತ್ತಿದ್ದಾಗ ದುಷ್ಕರ್ಮಿಗಳು ಬೈಕ್ ಗುದ್ದಿಸಿದ್ದಾರೆ. ಕೆಳಗೆ ಬಿದ್ದಾಗ, ‌ನೆರವಾಗುವ ಸೋಗಿನಲ್ಲಿ ಹತ್ತಿರ ಬಂದು ಬ್ಯಾಗ್ ಕಸಿದುಕೊಂಡು ಹೋಗಿದ್ದಾರೆ.

ಬರಹ ಇಷ್ಟವಾಯಿತೆ?

  • 5

    Happy
  • 1

    Amused
  • 2

    Sad
  • 0

    Frustrated
  • 6

    Angry

Comments:

0 comments

Write the first review for this !