ಒಂದೂವರೆ ಕಿಲೋಮೀಟರ್‌ಗೆ ಮುಕ್ಕಾಲು ಗಂಟೆ!

7

ಒಂದೂವರೆ ಕಿಲೋಮೀಟರ್‌ಗೆ ಮುಕ್ಕಾಲು ಗಂಟೆ!

Published:
Updated:
ಕೆ.ಆರ್‌.ಪುರ ಸೇತುವೆ ಬಳಿ ಸಂಚಾರ ದಟ್ಟಣೆಯ ನೋಟ ( ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದ ಟಿನ್‌ ಫ್ಯಾಕ್ಟರಿ ಬಳಿಯ ಸಂಚಾರ ದಟ್ಟಣೆಗೆ ಜನ ರೋಸಿ ಹೋಗಿದ್ದಾರೆ. ಕೇವಲ 1.5 ಕಿಲೋಮೀಟರ್‌ ಕ್ರಮಿಸಲು 45 ನಿಮಿಷ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲಿದೆ. ಅಧಿಕ ಸಂಖ್ಯೆಯ ಬಸ್‌ಗಳು, ಅಶಿಸ್ತಿನ ಚಾಲನೆ, ನಿತ್ಯ ಇಲ್ಲಿ ಗದ್ದಲದ ನೋಟ ಸಾಮಾನ್ಯ. ಅದಕ್ಕಾಗಿ ಕೆಲವು ಎಂಜಿನಿಯರ್‌ಗಳು ವಿವಿಧ ಮೂಲಗಳಿಂದ ಧನ ಸಂಗ್ರಹಿಸಿ ಟ್ರಾಫಿಕ್‌ ದೀಪ ಅಳವಡಿಸಲು ಸಿದ್ಧರಾಗಿದ್ದಾರೆ. ಇಲ್ಲಿನ ದಟ್ಟಣೆಗೆ ಕಾರಣಗಳು ಮತ್ತು ಪರಿಹಾರಗಳ ಕುರಿತ ಪಕ್ಷಿ ನೋಟ ಹೀಗಿದೆ. 

 ದಟ್ಟಣೆಗೇನು ಕಾರಣ?

* ಮಾರತ್‌ಹಳ್ಳಿಯಿಂದ ಕೆ.ಆರ್‌.ಪುರಂಗೆ ಬರುವ ಬಸ್‌ಗಳ ಪ್ರಮಾಣ ಹೆಚ್ಚಳ. ಅವುಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದಿರುವುದು
* ಬಸ್‌ಗಳು ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡದಿರುವುದು, ಅಶಿಸ್ತಿನ ಚಾಲನೆ. 
* ಅಶಿಸ್ತಿನ ನಿಲುಗಡೆಯಿಂದ ಕಾರು, ಇತರ ವಾಹನಗಳೂ ಸ್ಥಗಿತಗೊಳ್ಳುವುದು 
* ಸಮೀಪದಲ್ಲೇ ನಡೆಯುತ್ತಿರುವ ಮೆಟ್ರೊ ರೈಲುಮಾರ್ಗದ ಕಾಮಗಾರಿ
* ಖಾಲಿ ಸಂಚರಿಸುವ ಹವಾನಿಯಂತ್ರಿತ ಬಸ್‌ಗಳು ಬಳಸುವ ಸ್ಥಳ 
* ಸ್ಕೈವಾಕ್‌ ಬಳಸದೆ ಅಡ್ಡಾದಿಡ್ಡಿ ಓಡಾಡುವ ಪಾದಚಾರಿಗಳು

 ಪರಿಣಾಮ

* ಪೀಕ್‌ ಹವರ್‌ಗಳಲ್ಲಿ ಗಂಟೆಗಟ್ಟಲೆ ಸಮಯ ವ್ಯರ್ಥ 
* ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ 
* ನಿಭಾಯಿಸಲು ಪೊಲೀಸರಿಗೂ ಕಷ್ಟ 
* ಅಪಘಾತಗಳ ಆತಂಕ 
* ದಟ್ಟಣೆಯಲ್ಲಿ ಸಿಲುಕುವ ಅಂಬುಲೆನ್ಸ್‌ಗಳು

 ಏನು ಮಾಡಬಹುದು?

* ಟ್ರಾಫಿಕ್‌ ಸಿಗ್ನಲ್‌ ಅಳವಡಿಕೆ 
* ಮೆಟ್ರೊ ಕಾಮಗಾರಿ ವೇಗವರ್ಧಿಸುವುದು 
* ಬಸ್‌ಗಳ ನಿಲುಗಡೆ ನಿಯಂತ್ರಣ 
* 30 ಸೆಕೆಂಡ್‌ಗಳಿಗಿಂತ ಹೆಚ್ಚು ಕಾಲ ನಿಲ್ಲಿಸದಂತೆ ಸೂಚನೆ 
* ಹೆಚ್ಚುವರಿ ಪೊಲೀಸರ ನಿಯೋಜನೆ 

* ಈ ಪ್ರದೇಶದಲ್ಲಿ ಟ್ರಾಫಿಕ್‌ ನಿಯಂತ್ರಣಕ್ಕೆ ಸ್ವಯಂ ಸೇವಕರೂ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ವಿಪರೀತ ದಟ್ಟಣೆ, ಮಾಲಿನ್ಯದಿಂದ ಆರೋಗ್ಯ ಕೆಟ್ಟು ಹೋಗುವ ಆತಂಕ ಅವರನ್ನು ಕಾಡುತ್ತಿದೆ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 2

  Sad
 • 1

  Frustrated
 • 5

  Angry

Comments:

0 comments

Write the first review for this !