ಭಾರತಕ್ಕೆ ಆರ್ಥಿಕ ನಿರ್ಬಂಧದ ಬಗ್ಗೆ ಶೀಘ್ರ ನಿರ್ಣಯ: ಟ್ರಂಪ್‌

7

ಭಾರತಕ್ಕೆ ಆರ್ಥಿಕ ನಿರ್ಬಂಧದ ಬಗ್ಗೆ ಶೀಘ್ರ ನಿರ್ಣಯ: ಟ್ರಂಪ್‌

Published:
Updated:

ವಾಷಿಂಗ್ಟನ್: ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರುವ ಕುರಿತು ಶೀಘ್ರವೇ ತಿಳಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

ಎಸ್‌–400 ಟ್ರಯಂಫ್ ವಾಯುದಾಳಿ ನಿರೋಧಕ ಕ್ಷಿಪಣಿ ವ್ಯವಸ್ಥೆ ಖರೀದಿಸಲು ರಷ್ಯಾ ಜತೆಗೆ ಭಾರತ ಕಳೆದ ವಾರ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. 

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಭಾರತ–ರಷ್ಯಾ ಒಪ್ಪಂದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಭಾರತಕ್ಕೆ ತಿಳಿಯದೆ ಇರುತ್ತದೆಯೆ? ನೀವು ನಿರೀಕ್ಷಿಸಿದ್ದಕ್ಕಿಂತ ಶೀಘ್ರವೇ ತಿಳಿಯಲಿದೆ’ ಎಂದು ಹೇಳಿದ್ದಾರೆ.

ಅಮೆರಿಕ ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ರಾಷ್ಟ್ರಗಳ ಮೇಲೆ ಆರ್ಥಿಕ ನಿರ್ಬಂಧ ವಿಧಿಸಲು ಕಾಟ್ಸಾ (CAATSA–Countering America's Adversaries Through Sanctions Act) ಕಾನೂನು ರೂಪಿಸಿಕೊಂಡಿದೆ. 

ಈ ವರ್ಷಾರಂಭದಲ್ಲಿ ಕಾಟ್ಸಾ ತಿದ್ದುಪಡಿ ಮಾಡಲಾಗಿದೆ. ಇದರ ಅನ್ವಯ, ರಷ್ಯಾ ಜತೆಗೆ ಒಪ್ಪಂದ ಮಾಡಿಕೊಂಡಿರುವ ಭಾರತದ ಮೇಲೆ ನಿರ್ಬಂಧ ವಿಧಿಸುವ ನಿರ್ಣಯ ಕೈಗೊಳ್ಳುವ ಹಕ್ಕು ಇರುವುದು ಟ್ರಂಪ್‌ಗೆ ಮಾತ್ರ.

ಬರಹ ಇಷ್ಟವಾಯಿತೆ?

 • 25

  Happy
 • 3

  Amused
 • 1

  Sad
 • 4

  Frustrated
 • 14

  Angry

Comments:

0 comments

Write the first review for this !