‘ವರ್ಷದ ತೊಡಕು’ ದುಬಾರಿ

ಶನಿವಾರ, ಏಪ್ರಿಲ್ 20, 2019
31 °C
ನಗರದಲ್ಲಿ ಮಾಂಸದ ಬೆಲೆ ದಿಢೀರ್‌ ಏರಿಕೆ

‘ವರ್ಷದ ತೊಡಕು’ ದುಬಾರಿ

Published:
Updated:
Prajavani

ಬೆಂಗಳೂರು: ಯುಗಾದಿ ಹಬ್ಬದ ಮರುದಿನ ಮಾಂಸಾಹಾರಿಗಳಿಗೆ ಪ್ರಿಯವಾದ ದಿನ. ವರ್ಷಾರಂಭದಲ್ಲಿ ಯಾವುದೇ ತೊಡಕಾಗಬಾರದು ಎಂಬ ನಿಟ್ಟಿನಲ್ಲಿ ಈ ದಿನವನ್ನು ‘ವರ್ಷದ ತೊಡಕು’ ಎಂದು ಆಚರಿಸುವುದು ವಾಡಿಕೆ. ಕಳೆದ ವರ್ಷಕ್ಕಿಂತ ಈ ಬಾರಿಯ ‘ವರ್ಷದ ತೊಡಕು’ ಜನರ ಕಿಸೆಗೆ ದುಬಾರಿಯಾಗಿತ್ತು. 

‘ವರ್ಷದ ತೊಡಕು’ ಸಲು ವಾಗಿ ಯುಗಾದಿ ಹಬ್ಬದಂದು ಮಧ್ಯರಾತ್ರಿಯಿಂದಲೇ ನಗರದ ಎಲ್ಲ ಮಾಂಸ‌ದ ಅಂಗಡಿಗಳು ಸಜ್ಜಾಗಿದ್ದವು. ಭಾನುವಾರ ಮುಂಜಾನೆ ನಗರದ ಮಾಂಸ ದಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದರು. ಶನಿವಾರ ಮಧ್ಯರಾತ್ರಿಯಿಂ‌ದ ಭಾನುವಾರ ಮಧ್ಯಾಹ್ನ 2ಗಂಟೆಯವರೆಗೆ ಮಾಂಸದ ವ್ಯಾಪಾರ ಭರಾಟೆ ಜೋರಾಗಿ ನಡೆಯಿತು.

ಕುರಿ ಮಾಂಸ ಪ್ರತಿ ಕೆ.ಜಿ.ಗೆ  ₹500–540ಕ್ಕೆ ಏರಿಕೆ ಕಂಡಿತ್ತು. ನಾಟಿಕೋಳಿ ಮಾಂಸ ಕೆ.ಜಿ.ಗೆ  ₹350–400ರವರೆಗೂ ಬಿಕರಿಯಾಯಿತು. ಮೇಕೆ ಮಾಂಸ ಕೆ.ಜಿಗೆ ₹ 500ಕ್ಕೆ ಮಾರಾಟವಾಯಿತು.

‘ಹಬ್ಬದ ಪ್ರಯುಕ್ತ ಕುರಿ ಮಾಂಸವನ್ನು ಕೆ.ಜಿ.ಗೆ ₹ 540ರಿಂದ ₹ 550ಕ್ಕೆ, ಮೇಕೆ ಮಾಂಸ ಕೆ.ಜಿಗೆ ₹540ಕ್ಕೆ ಮಾರಾಟ ಮಾಡಿ‌ದೆವು’ ಎಂದು ನಗರದ ಗಂಗೇನಹಳ್ಳಿಯ ಮಾಂಸದ ವ್ಯಾಪಾರಿ ಶಬ್ಬೀರ್‌ ತಿಳಿಸಿದರು.

‘ಗ್ರಾಹಕರು ಯುಗಾದಿ ಹಬ್ಬದ ವರ್ಷದ ತೊಡಕಿಗೆ ಹೆಚ್ಚಾಗಿ ನಾಟಿ ಕೋಳಿಯನ್ನು ಕೇಳುತ್ತಾರೆ. ಸದ್ಯ ನಾಟಿ ಕೋಳಿ ಮಾಂಸವನ್ನು ಕೆ.ಜಿ.ಗೆ ₹400ರಿಂದ 420ಕ್ಕೆ ಮಾರಾಟ ಮಾಡಿದೆವು. ಫಾರಂ ಕೋಳಿ ಬೆಲೆ ಕೆ.ಜಿ.ಗೆ ₹130ರಿಂದ ₹200 ರೂ ಇತ್ತು’ ಎಂದು ಕೋಳಿ ಅಂಗಡಿಯ ಮಾಲೀಕ ಫಯಾಜ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !