ಭಾರತ–ಪಾಕಿಸ್ತಾನ ಪರಿಸ್ಥಿತಿ ಮೇಲೆ ವಿಶ್ವಸಂಸ್ಥೆ ನಿಗಾ

ಬುಧವಾರ, ಮಾರ್ಚ್ 27, 2019
26 °C

ಭಾರತ–ಪಾಕಿಸ್ತಾನ ಪರಿಸ್ಥಿತಿ ಮೇಲೆ ವಿಶ್ವಸಂಸ್ಥೆ ನಿಗಾ

Published:
Updated:

ವಿಶ್ವಸಂಸ್ಥೆ: ‘ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಮೇಲೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್  ‌ಅವರು ನಿರಂತರವಾಗಿ ನಿಗಾ ಇಟ್ಟಿದ್ದಾರೆ, ಅವರು ಕಚೇರಿ ಎರಡು ದೇಶದವರಿಗೂ ಲಭ್ಯವಿದೆ’ ಎಂದು ಅವರ ವಕ್ತಾರ ಸ್ಟೀಫನ್ ಡುವಾರಿಕ್ ತಿಳಿಸಿದ್ದಾರೆ.‌

ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವೆ ಉಲ್ಬಣಿಸಿರುವ ಬಿಕ್ಕಟ್ಟು ಶಮನಕ್ಕೆ ಎರಡೂ ದೇಶಗಳ ಪ್ರಧಾನಿ ಮಂತ್ರಿಗಳೊಂದಿಗೆ ಗುಟೆರಸ್ ಮಾತುಕತೆ ನಡೆಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ತಿಳಿದಿರುವಂತೆ ಎರಡೂ ದೇಶಗಳ ಮುಖ್ಯಸ್ಥರೊಂದಿಗೆ ಗುಟೆರಸ್ ಅವರು ದೂರವಾಣಿಯಲ್ಲಿ ಮಾತನಾಡಿಲ್ಲ’ ಎಂದು ಹೇಳಿದರು.

‘ಪರಿಸ್ಥಿತಿಯನ್ನು ನಾವು ಸಂಪೂರ್ಣವಾಗಿ ಅರಿತಿದ್ದೇವೆ. ಎರಡೂ ದೇಶಗಳೊಂದಿಗೆ ಮಹಾಪ್ರಧಾನ ಕಾರ್ಯದರ್ಶಿ ಮತ್ತು ಅವರ ಕಚೇರಿ ಸಿಬ್ಬಂದಿ ಸಂಪರ್ಕದಲ್ಲಿ ಇದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !