‘ನೈರ್ಮಲ್ಯ ಯೋಜನೆಯಲ್ಲಿ ಭಾರತ ತ್ವರಿತ ಪ್ರಗತಿ’

7

‘ನೈರ್ಮಲ್ಯ ಯೋಜನೆಯಲ್ಲಿ ಭಾರತ ತ್ವರಿತ ಪ್ರಗತಿ’

Published:
Updated:

ವಿಶ್ವಸಂಸ್ಥೆ: ಶಾಲೆಗಳಲ್ಲಿ ನೈರ್ಮಲ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಭಾರತ ತ್ವರಿತಗತಿಯ ಪ್ರಗತಿ ಸಾಧಿಸಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. 

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಮಕ್ಕಳ ನಿಧಿಗಾಗಿನ ಜಂಟಿ ನಿರ್ವಹಣಾ ಘಟಕವು, ‘ಕುಡಿಯುವ ನೀರು, ನೈರ್ಮಲ್ಯ ಮತ್ತು ಶಾಲೆಗಳಲ್ಲಿ ಸ್ವಚ್ಛತೆ’ ಕುರಿತು ನೀಡಿದ ವರದಿ ನೀಡಿದೆ. 

‘ಶಾಲೆಗಳಲ್ಲಿ ನೈರ್ಮಲ್ಯ ವ್ಯವಸ್ಥೆಯ ಸಮರ್ಪಕ ಅನುಷ್ಠಾನವು ಮಕ್ಕಳ ಕಲಿಕೆಗೆ ಆರೋಗ್ಯಕರ ಪರಿಸರ ಒದಗಿಸುತ್ತದೆ. ಹಾಗೆಯೇ ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ಯಾವುದೇ ಅಳುಕಿಲ್ಲದೆ ಶಾಲೆಗೆ ಹಾಜರಾಗುತ್ತಾರೆ.ಹತ್ತು ವರ್ಷಗಳ ಹಿಂದೆ ಭಾರತದ ಶಾಲೆಗಳಲ್ಲಿ ನೈರ್ಮಲ್ಯ ಯೋಜನೆಯೇ ಇರಲಿಲ್ಲ. ಆದರೆ ಈಗ ನೈರ್ಮಲ್ಯ ಸೌಲಭ್ಯಗಳಿಲ್ಲದ ಶಾಲೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ವರದಿ ಹೇಳಿದೆ. 

ಬಯಲು ಬಹಿರ್ದೆಸೆ ನಿಯಂತ್ರಣ ಯೋಜನೆಗಳಿಗಿಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ 35.2 ಕೋಟಿಯಿಂದ 37.8 ಕೋಟಿಗೆ ಏರಿಕೆಯಾಗಿದೆ ಎಂದಿದೆ. 

ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಸುರಕ್ಷಿತ ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !