ಅಮೆರಿಕ ಅಧ್ಯಕ್ಷ ಚುನಾವಣಾ ಕಣದಲ್ಲಿ ಜೂಲಿಯನ್‌ ಕ್ಯಾಸ್ಟ್ರೊ

7
ಬರಾಕ್‌ ಒಬಾಮ ಸಂಪುಟದಲ್ಲಿ ಸಚಿವರಾಗಿದ್ದ ಜೂಲಿಯನ್‌

ಅಮೆರಿಕ ಅಧ್ಯಕ್ಷ ಚುನಾವಣಾ ಕಣದಲ್ಲಿ ಜೂಲಿಯನ್‌ ಕ್ಯಾಸ್ಟ್ರೊ

Published:
Updated:
Prajavani

ಸ್ಯಾನ್‌ ಅಂಟೊನಿಯೊ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಸಂಪುಟದಲ್ಲಿ ಸಚಿವರಾಗಿದ್ದ ಜೂಲಿಯನ್‌ ಕ್ಯಾಸ್ಟ್ರೊ 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ. ಈ ಪಕ್ಷದ ಪರ ಅನೇಕರು ಅಭ್ಯರ್ಥಿ
ಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಲ್ಯಾಟಿನ್‌ ಅಮೆರಿಕ ಮೂಲದಿಂದ ಕ್ಯಾಸ್ಟ್ರೊ ಮಾತ್ರ ಆಕಾಂಕ್ಷಿಯಾಗಿದ್ದಾರೆ.

ಅಮೆರಿಕ–ಮೆಕ್ಸಿಕೊ ಗಡಿಯಿಂದ 321 ಕಿ.ಮೀ. ದೂರದ ಸ್ಯಾನ್‌ ಅಂಟೊನಿಯೊದ ನಿವಾಸಿಯಾಗಿರುವ ಕ್ಯಾಸ್ಟ್ರೊ, ಈ ಗಡಿಯಲ್ಲಿ ಗೋಡೆ ಕಟ್ಟುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರವನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ. ಅಕ್ರಮ ವಲಸಿಗರನ್ನು ತಡೆಯುವ ಉದ್ದೇಶದಿಂದ ಈ ಗೋಡೆ ಕಟ್ಟಬೇಕಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ. 

‘ನಮ್ಮ ದೇಶದ ಉನ್ನತ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಡೊನಾಲ್ಡ್ ಟ್ರಂಪ್‌ ವಿಫಲರಾಗಿದ್ದಾರೆ’ ಎಂದು ಕ್ಯಾಸ್ಟ್ರೊ ಟೀಕಿಸಿದ್ದಾರೆ. 

ಮೆಕ್ಸಿಕೊದಿಂದ ವಲಸೆ ಬಂದಿದ್ದ ವ್ಯಕ್ತಿಯ ಮರಿಮೊಮ್ಮಗನಾಗಿರುವ ಕ್ಯಾಸ್ಟ್ರೊ, ಉಭಯ ದೇಶಗಳ ನಡುವಣ ಸಂಬಂಧಕ್ಕೆ ಬಿರುಕು ಉಂಟು ಮಾಡುವಂತಿರುವ ಗೋಡೆಯ ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ. 

ಅಮೆರಿಕಕ್ಕೆ ‘ಹೊಸ ನಾಯಕತ್ವ’ದ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !