ಭಾನುವಾರ, ಮಾರ್ಚ್ 7, 2021
31 °C

ಭಾರತದ ಧಾರ್ಮಿಕ ಸ್ವಾತಂತ್ರ್ಯ: ಫೆಡರಲ್ ಆಯೋಗದಿಂದ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಭಾರತದ ಧಾರ್ಮಿಕ ಸ್ವಾತಂತ್ರ್ಯ ಹಾಗೂ ನಂಬಿಕೆಗಳ ಕುರಿತು ಅಮೆರಿಕ ಫೆಡರಲ್ ಆಯೋಗ ಇದೇ 12ರಂದು ವಿಚಾರಣೆ ನಡೆಸಲಿದೆ. 

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಫೆಡರಲ್ ಆಯೋಗ ಹೊಂದಿದೆ. ಈ ಸ್ವಾಯತ್ತ ಸಂಸ್ಥೆಯು 1998ರಲ್ಲಿ ರಚನೆಯಾಗಿತ್ತು. 

‘ಧಾರ್ಮಿಕ ಸ್ವಾತಂತ್ರ್ಯದ ಸವಾಲುಗಳು ಹಾಗೂ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸಲು ಇರುವ ಅವಕಾಶಗಳನ್ನು ಆಯೋಗ ಪರಿಶೀಲನೆ ನಡೆಸಲಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ಆಯೋಗದ (ಯುಎಸ್‌ಸಿಐಆರ್‌ಎಫ್‌) ಮುಖ್ಯಸ್ಥ ತೆನ್ಜಿನ್ ದೊರ್ಜಿ ಹೇಳಿದ್ದಾರೆ. 

ದೌರ್ಜನ್ಯ ಹೆಚ್ಚಳ: ‘ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಪ್ರಕರಣಗಳು ನಡೆದಿವೆ’ ಎಂದು ದೊರ್ಜಿ ಹೇಳಿದ್ದಾರೆ.

‘ಮೂಲಭೂತವಾದಿಗಳು ಧಾರ್ಮಿಕ ಅಲ್ಪಸಂಖ್ಯಾತರನ್ನು ಬೆದರಿಸುವ, ಕಿರುಕುಳ ನೀಡುವ ಹಾಗೂ ಹತ್ಯೆ ಮಾಡುವ ಘಟನೆಗಳೂ ನಡೆದಿವೆ. ಈ ಎಲ್ಲ ಪ್ರಕರಣಗಳು ಭಾರತೀಯ ಸಂವಿಧಾನವು ಕೋಟ್ಯಂತರ ಜನರಿಗೆ ನೀಡಿರುವ ಮೂಲಭೂತ ಹಕ್ಕುಗಳಿಗೆ ನೇರ ಬೆದರಿಕೆ ಒಡ್ಡಿವೆ. ತಮ್ಮ ನಂಬಿಕೆ, ಆಚರಣೆಗಳನ್ನು ಪಾಲಿಸಲು ಜನರಿಗೆ ಅಡ್ಡಿಪಡಿಸಲಾಗುತ್ತಿದೆ’ ಎಂದು ದೊರ್ಜಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು