ವಿರಕ್ತ ಮಠ; ಪಟ್ಟಾಧಿಕಾರಕ್ಕೆ ವಿರೋಧ

6
ಮಲ್ಲಿಕಾರ್ಜುನ ದೇವರ ವಿರುದ್ಧ ಭಕ್ತರ ಅಸಮಾಧಾನ; ಮಠ ತೊರೆಯಲು ಆಗ್ರಹ

ವಿರಕ್ತ ಮಠ; ಪಟ್ಟಾಧಿಕಾರಕ್ಕೆ ವಿರೋಧ

Published:
Updated:
Deccan Herald

ಚಡಚಣ: ಪಟ್ಟಣದ ಷಡಕ್ಷರಿ ಶಿವಯೋಗಿಗಳ ವಿರಕ್ತ ಮಠಕ್ಕೆ ಮುಂಬರುವ ಡಿಸೆಂಬರ್‌ನಲ್ಲಿ ಉತ್ತರಾಧಿಕಾರಿಯಾಗಿ ಈಗಾಗಲೇ ನಿಯೋಜನೆಗೊಂಡಿರುವ, ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರಕ್ಕೆ ಒಂದೆಡೆ ಭರದ ಸಿದ್ಧತೆ ನಡೆದಿದ್ದರೆ; ಇನ್ನೊಂದೆಡೆ ಅಪಸ್ವರವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದೀಗ ಸುತ್ತಮುತ್ತಲ ಗ್ರಾಮಗಳಲ್ಲೂ ಮಠದ ಪಟ್ಟಾಧಿಕಾರ ವಿಷಯವೇ ಚರ್ಚೆಗೀಡಾಗುತ್ತಿದ್ದು, ಪರ–ವಿರೋಧ ನಡೆದಿದೆ. ಬಹುತೇಕರು ಮಲ್ಲಿಕಾರ್ಜುನ ದೇವರ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಠದ ನಿಕಟಪೂರ್ವ ಪೀಠಾಧೀಶರಾಗಿದ್ದ ಲಿಂಗೈಕ್ಯ ಶಿವಾನಂದ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ನಿಯೋಜನೆಗೊಂಡಿದ್ದ ಮಲ್ಲಿಕಾರ್ಜುನ ದೇವರು, ‘ಮಠದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ. ತಮ್ಮ ಪೂರ್ವಾಶ್ರಮದ ತಂದೆ–ತಾಯಿ, ಕುಟುಂಬವನ್ನು ಮಠದಲ್ಲೇ ಇಟ್ಟುಕೊಂಡು ಸಲಹುತ್ತಿದ್ದಾರೆ. ವಿರಕ್ತ ಮಠಗಳಲ್ಲಿ ಸ್ತ್ರೀಯರ ವಾಸಕ್ಕೆ ಅವಕಾಶವಿಲ್ಲ. ಇಂಥ ಸನ್ನಿವೇಶದಲ್ಲಿ ಮಲ್ಲಿಕಾರ್ಜುನ ದೇವರು ವಿರಕ್ತ ಮಠವನ್ನು ಸಂಸಾರಸ್ಥರ ಮಠವನ್ನಾಗಿ ಪರಿವರ್ತಿಸಿದ್ದಾರೆ’ ಎಂಬ ದೂರು ಭಕ್ತ ಸಮೂಹದಿಂದ ವ್ಯಾಪಕವಾಗಿದೆ.

‘ಮಲ್ಲಿಕಾರ್ಜುನ ದೇವರ ತಂದೆ ದಯಾನಂದ ಸ್ವಾಮೀಜಿ ಮಠದಲ್ಲೇ ವಾಸವಿದ್ದಾರೆ. ಇವರಿಗೆ ಇಬ್ಬರು ಪತ್ನಿಯರಿದ್ದು, ಒಬ್ಬಾಕೆ ಮಠದ 40 ಎಕರೆ ಜಮೀನಿನಲ್ಲಿ ವಾಸವಿದ್ದಾರೆ. ಭಕ್ತರು ಪ್ರಶ್ನಿಸಿದರೆ ತಿರುಗಿ ಬೀಳುತ್ತಿದ್ದಾರೆ. ಇನ್ನೊಬ್ಬಾಕೆ ಮಠದಲ್ಲಿಯೇ ವಾಸವಿದ್ದಾರೆ.

ಮಠಕ್ಕೆ ಸೇರಿದ ಪಟ್ಟಣದ ಹೃದಯ ಭಾಗದಲ್ಲಿನ 1.27 ಎಕರೆ ಆಸ್ತಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಿ, ಒಂದೊಂದಾಗಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಡಿ. 22, 23, 24ರಂದು ಪಟ್ಟಾಧಿಕಾರ ನಡೆಯಲು ನಾವು ಅವಕಾಶ ನೀಡುವುದಿಲ್ಲ’ ಎಂದು ಮಠದ ಭಕ್ತರಾದ ಗುರುಸಿದ್ದಪ್ಪ ಪಾವಲೆ, ನಾಗರಾಜ ಅವಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !