'ವಿವೇಕಾನಂದರ ಹೆಸರಲ್ಲೇ ಚಮತ್ಕಾರವಿದೆ'

7
ಜಿಲ್ಲೆಯಾದ್ಯಂಥ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ

'ವಿವೇಕಾನಂದರ ಹೆಸರಲ್ಲೇ ಚಮತ್ಕಾರವಿದೆ'

Published:
Updated:
Prajavani

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂಥ ಶಾಲಾ–ಕಾಲೇಜುಗಳು, ಸಂಘ–ಸಂಸ್ಥೆಗಳಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ 156ನೇ ಜಯಂತ್ಯುತ್ಸವ ಆಚರಿಸಲಾಯಿತು.

ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು.

ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮಾತನಾಡಿ, ‘ವಿವೇಕಾನಂದ ಎನ್ನುವ ಹೆಸರಲ್ಲೇ ಅದೇನೋ ಒಂದು ಚಮತ್ಕಾರವಿದೆ. ಪ್ರತಿ ಕ್ಷಣ ಆ ನಾಮವನ್ನು ಜಪಿಸುವವನು ಆತ್ಮ ಸಾಕ್ಷಾತ್ಕಾರಕ್ಕೆ ಒಳಗಾಗುತ್ತಾನೆ. ಯಾವ ವ್ಯಕ್ತಿ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೋ, ಆ ವ್ಯಕ್ತಿ ಜಗತ್ತನ್ನೇ ಗೆಲ್ಲುವಂತ ಶಕ್ತಿಯನ್ನು ಮೈತುಂಬಿಕೊಳ್ಳುತ್ತಾನೆ’ ಎಂದರು.

ಉಪನ್ಯಾಸಕ ಎಸ್.ಜಿ.ಕುಂಬಾರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಜಿ.ಎಚ್.ಮಣ್ಣೂರ, ಡಾ.ಸುಮಿತ್ರಾ ಸಾವಂತ, ಆರ್.ಬಿ.ಕಪಾಳಿ, ಸೀಮಾ ಪಾಟೀಲ, ಬಿ.ಎಸ್.ಕರ್ಜಗಿ, ಎಂ.ಎಸ್.ದೊಡಮನಿ, ಆರತಿ ಬಿಸ್ಟಗೊಂಡ, ಸುನೀಲ ಯಾದವ, ಮಂಜುನಾಥ ಜುನಗೊಂಡ ಇದ್ದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿಕುಮಾರ ಮಾತನಾಡಿ, ‘ಯುವ ಜನತೆಯಲ್ಲಿ ನವೋತ್ಸಾಹವನ್ನು ತುಂಬಿ, ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ, ನವ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟವರು ಸ್ವಾಮಿ ವಿವೇಕಾನಂದರು. ಅವರ ತತ್ವಗಳನ್ನು ಅನುಸರಿಸಿ ಸದೃಢ ದೇಶವನ್ನು ಕಟ್ಟುವ ಹಾಗೂ ವಿಶ್ವಗುರು ಆಗಿಸುವ ದೃಢ ಸಂಕಲ್ಪವನ್ನು ನಾವೆಲ್ಲರೂ ಮಾಡುವ ಅವಶ್ಯಕತೆಯಿದೆ’ ಎಂದು ಹೇಳಿದರು.

ಪ್ರಾಚಾರ್ಯ ಎಂ.ಕೆ.ನಾಯಕ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಅಧಿಕಾರಿ ಬಿ.ಎಂ.ಕೊರಗು, ಚಂದ್ರಕಾಂತ ಬಿರಾದಾರ, ಪಾಂಡು ಮೋರೆ, ಶಿವಪ್ರಸಾದ ಅಕ್ಕಿ ಇದ್ದರು.

ನಗರ ಹೊರ ವಲಯದ ಇಟ್ಟಂಗಿಹಾಳ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ವಲಯ ಬಿಇಓ ಆರ್.ಎನ್.ಹುರುಳಿ ಮಾತನಾಡಿದರು. ಎಸ್.ಎಸ್.ದೊಡಮನಿ, ಎಸ್.ಬಿ.ಹೆಗಳಾಡಿ, ಸುರೇಶ ಕುಪ್ಪಿ, ಎನ್.ಜಿ.ಯರನಾಳ, ಬಸವರಾಜ ಎಂ.ಎಚ್, ಆರ್.ಎಸ್.ಬಿರಾದಾರ, ಪ್ರಶಾಂತ ಪರಜಣ್ಣವರ, ಬಿ.ಎಸ್.ಹತ್ತಿ ಇದ್ದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷದಲ್ಲಿ ಕಂಗೊಳಿಸಿದರು.

ಕಮಲಾದೇವಿ ಪಾಟೀಲ ಶಾಲೆ : ಇಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಮುಖ್ಯೋಪಾಧ್ಯಾಯ ದಿಲೀಪಕುಮಾರ ಗಜಾಕೋಶ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ.ಬಡಿಗೇರ ಉಪನ್ಯಾಸ ನೀಡಿದರು. ಬಸವರಾಜ ಕುಂಬಾರ, ಭೂದೇವಿ ಪಾಟೀಲ, ಸುನಂದಾ ನರಸನಗೌಡ ಇದ್ದರು.

ಜೀವನಾಡಿ ಸಾಹಿತ್ಯ ವೇದಿಕೆ

ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಅಮರೇಶ ಸಾಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ಯುವ ಸಾಹಿತಿ ಸಂತೋಷಕುಮಾರ ನಿಗಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು. ಅಶೋಕ ಅಂಬಾಜಿ ಮಾತನಾಡಿದರು.

ಎ.ಬಿ.ಜತ್ತಿ ಪದವಿಪೂರ್ವ ಮಹಾವಿದ್ಯಾಲಯ: ಜಯಂತ್ಯುತ್ಸವ ಅಂಗವಾಗಿ ವಿ.ವಿ ಯುವ ಸಪ್ತಾಹ ಸಂಘಟಿಸಿತ್ತು. ಅಮ್ಮನ ಮಡಿಲು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು. ಪ್ರಾಚಾರ್ಯ ಡಾ.ಎಂ.ಬಿ.ಭಿರಡಿ ಅಧ್ಯಕ್ಷತೆ ವಹಿಸಿದ್ದರು.

ಬಂಗಾರಮ್ಮ ಸಜ್ಜನ ಕಾಲೇಜು: ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಯೋಜಕಿ ಭುವನೇಶ್ವರ ಕೋರವಾರ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಪಿ.ಎಂ.ಬಿರಾದಾರ, ಪ್ರೊ.ಬಿ.ಬಿ.ಹಡಪದ, ಶ್ವೇತಾ ಘಂಟೆ, ಮಾನಸಿ ಕುಲಕರ್ಣಿ, ಅಪೂರ್ವ ನಾಯ್ಕೋಡಿ, ಐಶ್ವರ್ಯ ಸೊನ್ನದ, ಕಲ್ಮೇಶ ಸಾಹುಕಾರ ಇದ್ದರು.

ನಗರದ ಬಸವೇಶ್ವರ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ವೈದ್ಯ ಡಾ.ಸಂಜು ಜೋಶಿ ಮಾತನಾಡಿದರು. ಪ್ರಾಚಾರ್ಯ ಬಿ.ಎಸ್.ಬಾಪಗೊಂಡ ಅಧ್ಯಕ್ಷತೆ ವಹಿಸಿದ್ದರು. ಸಚಿನ್‌ ಕುಳಗೇರಿ, ವಿನೋದ ಮನ್ನವಡ್ಡರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !