ಜನಾಂದೋಲನ ಮಹಾ ಮೈತ್ರಿ ಕೂಗು

7
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ

ಜನಾಂದೋಲನ ಮಹಾ ಮೈತ್ರಿ ಕೂಗು

Published:
Updated:

ಬೆಂಗಳೂರು: ‘ರೈತ ಹೋರಾಟಕ್ಕೆ ಜನಾಂದೋಲನಗಳ ಮಹಾ ಮೈತ್ರಿ ಆಗಬೇಕು’ ಎಂಬ ಧ್ವನಿ ಬುಧವಾರ ನಗರದಲ್ಲಿ ನಡೆದ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆಯಲ್ಲಿ ಕೇಳಿಬಂದಿತು.

ನಂಜುಂಡಸ್ವಾಮಿ ಅವರ ಪುತ್ರಿ, ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಈ ಕುರಿತು ಮಾತನಾಡಿ, ‘ಜನಪರ ಹೋರಾಟದಲ್ಲಿ ತೊಡಗಿರುವ ಬೇರೆ ಸಂಘಟನೆಗಳನ್ನು ನಮ್ಮ ಪ್ರತಿಸ್ಪರ್ಧಿಗಳು ಅಥವಾ ವಿರೋಧಿಗಳು ಎಂಬ ನೆಲೆಯಲ್ಲಿ ನೋಡುವುದು ಸಲ್ಲದು. ಎಲ್ಲರ ಉದ್ದೇಶವೂ ಒಂದೇ. ಹಾಗಾಗಿ  ಇದು ಎಲ್ಲರನ್ನೂ ಒಗ್ಗೂಡಿಸುವ ಚಳವಳಿ ಆಗಬೇಕು. ನಮ್ಮ ಸಣ್ಣತನಗಳನ್ನು ಬದಿಗಿಟ್ಟು ಕೆಲಸ ಮಾಡೋಣ’ ಎಂದರು. ‘ನಮ್ಮೊಳಗಿನ ಭಿನ್ನಾಭಿಪ್ರಾಯ ಬದಿಗಿಟ್ಟು ಆಂತರಿಕ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಹೋಗೋಣ. ಈ ಹೋರಾಟಕ್ಕೆ ಸಾಮೂಹಿಕ ನಾಯಕತ್ವದ ಅಗತ್ಯವಿದೆ. ರೈತ ಸಂಘದ್ದು ಜಾತಿ, ವರ್ಗ ಮೀರಿದ ಚಳವಳಿ’ ಎಂದು ಹೇಳಿದರು. 

ದೇಶ ಮಾರುವುದೇ ಸೇವೆ!

ಸಾಹಿತಿ ದೇವನೂರು ಮಹಾದೇವ ಮಾತನಾಡಿ, ‘ಜಾಗತೀಕರಣದ ಕಾಲಘಟ್ಟದಲ್ಲಿ ಹಣ ಆಳ್ವಿಕೆ ಮಾಡುತ್ತಿದೆ. ಪ್ರಧಾನಿ ಸಹಿತ ಜನಸೇವಕರೆನಿಸಿಕೊಂಡವರು ಬಂಡವಾಳ ಹೂಡಿದವರ ಪರ ಕೆಲಸ ಮಾಡುತ್ತಿದ್ದಾರೆ. ದೇಶ ಮಾರುವುದನ್ನೇ ದೇಶ ಸೇವೆ ಎಂಬಂತೆ ಬಿಂಬಿಸುತ್ತಿದ್ದಾರೆ’ ಎಂದ ಅವರು, ‘ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹುಸಿ ರಾಜಕಾರಣದ ಮುಂದೆ ಹಸಿ ವಾಸ್ತವವನ್ನು ಹಿಡಿಯಬೇಕು’ ಎಂದರು. 

ನಟ ಪ್ರಕಾಶ್‌ ರೈ ಮಾತನಾಡಿ, ‘ಸೂಕ್ಷ್ಮತೆ ಅರಿಯದೆ ನಡೆದುಕೊಳ್ಳುತ್ತಿರುವ ಆಡಳಿತ ವ್ಯವಸ್ಥೆಗೆ ಇಂದಿನ ಚುನಾವಣಾ ವ್ಯವಸ್ಥೆ ಕಾರಣ. ಚುನಾವಣಾ ಪ್ರಕ್ರಿಯೆಯಲ್ಲಿ ನಮ್ಮ ಸಮಗ್ರತೆ ಹೇಗಿರಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ನಮ್ಮನ್ನು ನಾವು ಪ್ರಜ್ಞೆಯೊಳಗೆ ಮೂಡಿಸಿಕೊಳ್ಳಬೇಕು’ ಎಂದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !