ಅಭಿವೃದ್ಧಿಗೆ ಜಲ ಸಂರಕ್ಷಣೆ ಮೂಲಾಧಾರ

7

ಅಭಿವೃದ್ಧಿಗೆ ಜಲ ಸಂರಕ್ಷಣೆ ಮೂಲಾಧಾರ

Published:
Updated:
ತುಳವನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಮತ್ತು ಗಣ್ಯರು

ಚಿಂತಾಮಣಿ: ಜಲ ಸಂರಕ್ಷಣೆ ಮತ್ತು ಕೌಶಲಾಭಿವೃದ್ಧಿ ನಾಡಿನ ಸಮೃದ್ಧಿಗೆ ಮೂಲಾಧಾರ ಎಂದು ಕವಿ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತುಳವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರದ ನಿರ್ಮಾಣಕ್ಕೆ ಮುನ್ನ ಜನರ ಬದುಕು ಹಸನಾಗಲು ಬೇಕಾದ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದರು. ಕೃಷಿ ಮತ್ತು ಕುಡಿಯಲು ಬೇಕಾದ ನೀರು ಪೂರೈಕೆಗೆ ಕೆರೆಗಳನ್ನು ಕಟ್ಟಿಸಿದ್ದರು ಎಂದು ತಿಳಿಸಿದರು.

ಜನರ ಜೀವನ ನಿರ್ವಹಣೆಗೆ ಬೇಕಾದ ವಸ್ತುಗಳನ್ನು ತಯಾರಿಸುತ್ತಿದ್ದ ಕುಲವೃತ್ತಿ ಪ್ರೋತ್ಸಾಹಿಸಲು ಹಲವಾರು ಪೇಟೆಗಳನ್ನು ನಿರ್ಮಿಸಿದ್ದರು. ಇತರೆ ಜಾತಿ ಧರ್ಮೀಯರಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯ ಕಾಪಾಡಲು ಗಮನ ನೀಡಿದ್ದರು. ಅವರ ಸಾಮಾಜಿಕ ಕಳಕಳಿಯ ಯೋಜನೆಗಳು, ಅಭಿವೃದ್ಧಿ ಕೆಲಸಗಳು ಇಂದಿಗೂ ಮಾದರಿಯಾಗಿವೆ ಎಂದು ನುಡಿದರು.

ಮುಖ್ಯಶಿಕ್ಷಕ ಸಿ.ವೆಂಕಟರಮಣ ಮಾತನಾಡಿ, ಕೆಂಪೇಗೌಡ ಸರ್ವಜನಾಂಗದ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಿದ್ದಾರೆ ಎಂದರು.

ಶಿಕ್ಷಕರಾದ ಆಂಜನೇಯ, ಲಕ್ಷ್ಮೀದೇವಮ್ಮ, ಸುಧಾಮಣಿ, ನಾಗಲಕ್ಷ್ಮಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !