ಮೊಳಕಾಲ್ಮುರು: 66 ಗ್ರಾಮಗಳಲ್ಲಿ ನೀರಿನ ಸಮಸ್ಯೆ

7
₹7.43 ಕೋಟಿ ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಕೆ

ಮೊಳಕಾಲ್ಮುರು: 66 ಗ್ರಾಮಗಳಲ್ಲಿ ನೀರಿನ ಸಮಸ್ಯೆ

Published:
Updated:
ಮೊಳಕಾಲ್ಮುರು ತಾಲ್ಲೂಕಿನ ಬೆಳವಿನ ಮರದ ಹಟ್ಟಿಯಲ್ಲಿ ಕುಡಿಯುವ ನೀರಿಗೆ ಕೊಡಗಳನ್ನು ಸರದಿಯಲ್ಲಿ ಇಟ್ಟಿರುವ ದೃಶ್ಯ.

ಮೊಳಕಾಲ್ಮುರು: ತಾಲ್ಲೂಕಿನ 66 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಸಮಸ್ಯೆ ತೀವ್ರ ಉಲ್ಬಣವಾಗುತ್ತಿದ್ದು, ನಾಗರಿಕರು ಆತಂಕದಲ್ಲಿದ್ದಾರೆ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಂಡು ಬಂದರೂ ಚುನಾವಣಾ ಕಾವಿನಲ್ಲಿ ಸಮಸ್ಯೆ ಅಷ್ಟಾಗಿ ಮುಟ್ಟಲಿಲ್ಲ. ಇಸ್ರೊ ತಂತ್ರಜ್ಞಾನದ ನೀರಿನ ಮೂಲವನ್ನು ಪತ್ತೆಹಚ್ಚಲಾಗುವುದು ಎಂದು ಶಾಸಕ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಕುಡಿಯುವ ನೀರಿನ ವಿಭಾಗದ ಅಧಿಕಾರಿಗಳ ಮಾಹಿತಿ ಪ್ರಕಾರ, ತಾಲ್ಲೂಕಿನಲ್ಲಿ ಒಟ್ಟು 134 ಜನವಸತಿ ಪ್ರದೇಶಗಳಿದ್ದು, ಈ ಪೈಕಿ ತಮ್ಮೇನಹಳ್ಳಿ, ಕೋನಾಪುರ, ಬೊಮ್ಮದೇವರಹಳ್ಳಿ, ಸಂತೇಗುಡ್ಡ, ಜೆ.ಬಿ. ಹಳ್ಳಿ, ಪಕ್ಕುರ್ತಿ, ರಾಯಾಪುರ, ಯರ್ರೇನಹಳ್ಳಿ, ಬೆಳವಿನ ಮರದಹಟ್ಟಿ, ನೇರ್ಲಹಳ್ಳಿ, ರಾಂಪುರ, ನಾಗಸಮುದ್ರ ಸೇರಿ 66 ಜನವಸತಿ ಪ್ರದೇಶಗಳಲ್ಲಿ ಒಂದು ತಿಂಗಳೊಳಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

‘ನೀರಿನ ಸಮಸ್ಯೆ ನಿವಾರಿಸಲು ಶಾಸಕ ಶ್ರೀರಾಮುಲು ಸರ್ಕಾರಕ್ಕೆ ವರದಿ ಸಲ್ಲಿಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ₹7.45 ಕೋಟಿ ಮೊತ್ತದ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರ ಮುಂದಿನ ಪ್ರಗತಿ ಬಗ್ಗೆ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳುತ್ತಾರೆ.

‘ತಾಲ್ಲೂಕಿನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿರುವ ಬಾಕಿ ₹48 ಲಕ್ಷ ಇದೆ. ಶೀಘ್ರವೇ ಹಣ ಬಿಡುಗಡೆಯಾಗಲಿದ್ದು, ಪಾವತಿ ಮಾಡಲಾಗುವುದು. ಕ್ರಿಯಾ ಯೋಜನೆಯಲ್ಲಿ ಇಲ್ಲದೇ ಕೊರೆಸಿರುವ ಕೊಳವೆಬಾವಿ ಬಾಕಿ ಹಣ ₹1.47 ಕೋಟಿ ನೀಡಬೇಕಿದೆ. ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ತಾಲ್ಲೂಕು ಪಂಚಾಯಿತಿ ಇಒ ಸಿ.ಎನ್‌. ಚಂದ್ರಶೇಖರ್‌ ‘ಪ್ರಜಾವಾಣಿ’ ಗೆ ತಿಳಿಸಿದರು.

2016–17 ನೇ ಸಾಲಿನಲ್ಲಿ ₹9.73 ವೆಚ್ಚದ ಕ್ರಿಯಾಯೋಜನೆ ಸಲ್ಲಿಸಲಾಗಿತ್ತು. ನಯಾ ಪೈಸೆ ಬಿಡುಗಡೆಯಾಗಿಲ್ಲ. ಮುಂದುವರಿದ ಕಾಮಗಾರಿಗಳಿಗೆ ಹಣ ಪಾವತಿಸಲು ಯಾವುದೇ ಅನುದಾನ ಬಿಡುಗಡೆಯಾಗಿಲ್ಲ
- ಸುಕುಮಾರ್ ಎಂ,  ಎಇಇ 

– ಕೊಂಡ್ಲಹಳ್ಳಿ ಜಯಪ್ರಕಾಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !