ಎಲ್ಲ ನೀರಿಗಾಗಿ..

ಗುರುವಾರ , ಏಪ್ರಿಲ್ 25, 2019
33 °C

ಎಲ್ಲ ನೀರಿಗಾಗಿ..

Published:
Updated:
Prajavani

ಪ್ರತಿ ಬೇಸಿಗೆಯಲ್ಲಿ ನೀರಿಗಾಗಿ ಪರದಾಟ, ಅಲೆದಾಟ ಸಿಟಿಜನರಿಗೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಚಿತ್ರಗಳೇ ಸಾಕ್ಷಿಯಲ್ಲವೇ? 

ಕಾವೇರಿ ನೀರು ಎಲ್ಲರ ಭಾಗ್ಯವಲ್ಲ. ಕೆಲವೆಡೆ ಅದು ತಲುಪುವುದರಲ್ಲಿ ಇನ್ನೆಷ್ಟು ಬೇಸಿಗೆ ಮುಗಿಯುವುದೋ. ಅಲ್ಲಿ ಇಲ್ಲಿ ಪೈಪ್‌ಗಳನ್ನು ಹರವಿ ತಿಂಗಳುಗಟ್ಟಲೆ ನೆಲ ಅಗೆದು ದೂಳು ಎಬ್ಬಿಸಿದ್ದೇ ಬಂತು. ಕಾವೇರಿ ಸುಳಿವೇ ಇಲ್ಲ. ಇನ್ನು ಉಳಿದಿರುವ ದಾರಿ ಎಂದರೆ ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳು ರೂಪಿಸಿದ ವಾಟರ್‌ ಟ್ಯಾಂಕ್‌ಗಳು ಇಲ್ಲವೇ ಖಾಸಗಿಯವರು ಸರಬರಾಜು ಮಾಡುವ ಟ್ಯಾಂಕರ್‌ಗಳ ಮೂಲಕ ನೀರು ಮನೆಗಳ ಸಂಪು ಕಾಣಬೇಕು.

ಈ ಖಾಸಗಿಯವರ ಟ್ಯಾಂಕರ್‌ಗಳದ್ದು ಬಾಯಿಗೆ ಬಂದದ್ದೇ ರೇಟ್‌. ಅವು ಎಲ್ಲೆಂದರಲ್ಲಿ ಬರಲು ಸಾಧ್ಯವೂ ಆಗುವುದಿಲ್ಲ. ರಸ್ತೆಗಳ ಸಮಸ್ಯೆ ಬೇರೆ. ಡೆಡ್‌ಎಂಡ್‌ನಲ್ಲಿರುವ ಮನೆಗಳಿದ್ದರೆ ಇನ್ನೂ ಫಜೀತಿ. ಅದಕ್ಕೂ ಹೆಚ್ಚುವರಿ ರೇಟ್‌. ಕಷ್ಟಪಟ್ಟು ಸಂಪ್‌ ತುಂಬಿಸಿಕೊಂಡ ಮೇಲೆ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ಸಾಗಿಸಲು ವಿದ್ಯುತ್‌ ಸ್ಥಗಿತದಂಥ ಕಾಟ. ಬೇಸಿಗೆಯ ಆರಂಭದಲ್ಲಿಯೇ ಈ ಪರಿ ಇನ್ನು ಏಪ್ರಿಲ್‌, ಮೇ ತಿಂಗಳಲ್ಲಿ ಪರಿಸ್ಥಿತಿ ಹೇಗಿರುತ್ತೊ...

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !