ದಶಕದಿಂದ ಕೋಮಾದಲ್ಲಿರುವ ಮಹಿಳೆಗೆ ಮಗು ಜನನ!

7
ತನಿಖೆ ಚುರಕುಗೊಳಿಸಿದ ಅಮೆರಿಕ ಪೊಲೀಸರು

ದಶಕದಿಂದ ಕೋಮಾದಲ್ಲಿರುವ ಮಹಿಳೆಗೆ ಮಗು ಜನನ!

Published:
Updated:

ಫೀನಿಕ್ಸ್: ಅಮೆರಿಕದ ಅರಿಜೋನಾ ರಾಜ್ಯದ ಚಿಕಿತ್ಸಾ ಕೇಂದ್ರವೊಂದರಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಕೋಮಾ ಸ್ಥಿತಿಯಲ್ಲಿರುವ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಕರಣದ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಕೃತ್ಯ ಎಸಗಿದವರು ತೀವ್ರ ತೊಂದರೆಗೆ ಸಿಲುಕಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯ ಸುದ್ದಿ ವಾಹಿನಿ ಪ್ರಕಾರ, ಹಕೆಂಡಾ ಹೆಲ್ತ್ ಕೇರ್‌ನಲ್ಲಿ ಈ ಮಹಿಳೆ ಡಿಸೆಂಬರ್ 29ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆ ಯಾರೆಂಬುದನ್ನು ವರದಿ ತಿಳಿಸಿಲ್ಲ ಮತ್ತು ಕುಟುಂಬ ಅಥವಾ ಪೋಷಕರು ಆಕೆಗೆ ಇದ್ದಾರೆಯೇ ಎಂಬುದನ್ನೂ ಖಚಿತಪಡಿಸಿಲ್ಲ.

‘ಮಹಿಳೆ ನರಳುತ್ತಿದ್ದ ಶಬ್ದ ಕೇಳಿ ನರ್ಸ್‌ ಬಂದಾಗ ಮಗುವಿನ ತಲೆ ಹೊರ ಬರುತ್ತಿತ್ತು. ಅದಕ್ಕೂ ಮುನ್ನ ಆಕೆ ಗರ್ಭಿಣಿ ಎಂಬುದು ಆಸ್ಪತ್ರೆಯ ಯಾವೊಬ್ಬ ಸಿಬ್ಬಂದಿಗೂ ಗೊತ್ತಿರಲಿಲ್ಲ. ಜನಿಸಿದ ಮಗು ಆರೋಗ್ಯವಾಗಿದೆ ಎಂದು ಮೂಲಗಳು ಹೇಳಿವೆ’ ಎಂದು ಮಾಧ್ಯಮ ವರದಿ ತಿಳಿಸಿದೆ.

ಹಕೆಂಡಾ ಹೆಲ್ತ್‌ ಕೇರ್‌ ಅಧಿಕಾರಿಗಳು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಮಹಿಳೆ ಮಗುವಿಗೆ ಜನ್ಮ ನೀಡಿದ್ದನ್ನು ದೃಢೀಕರಿಸಿಲ್ಲ.

ತನಿಖೆ ನಡೆಯುತ್ತಿದೆ ಎಂದು ಹೇಳಿರುವ ಪೊಲೀಸ್ ಅಧಿಕಾರಿಗಳು, ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 4

  Frustrated
 • 5

  Angry

Comments:

0 comments

Write the first review for this !