ಕಷ್ಟ ಸಹಿಷ್ಣುತೆ, ಛಲ, ದಿಟ್ಟ ಹೋರಾಟ ಅವಳಿಂದ ನಾನು ಕಲಿತ ಪಾಠ. ಸದಾ ಚಟುವಟಿಕೆ. ಸೋಮಾರಿತನ ಸುಳಿಯಗೊಡದ ಕ್ರಿಯಾ ಶೀಲ ಚೈತನ್ಯ. ಎಂದಿಗೂ ಬತ್ತದ ಜೀವನೋತ್ಸಾಹ. ದಣಿಯದ ಅವಳ ಮನೋಸ್ಥೈರ್ಯ, ಮನೋದಾರ್ಢ್ಯ ನನಗೆ ನೀಡುತ್ತಿದೆ ನಿತ್ಯ ಧೈರ್ಯ. ಒಂಟಿತನದ ನೋವು ನುಂಗಿಕೊಂಡೇ ಮಕ್ಕಳ ಏಳಿಗೆಗೆ ಅವಳ ಒಂಟೆತ್ತಿನ ದುಡಿತ ನನಗೆ ಮಾದರಿ. ಅವಮಾನಿಸಿದವರ , ಅನುಮಾನಿಸಿದವರ ಮುಖಕ್ಕೆ ಹೊಡೆದಂತೆ ಬಾಳ್ವೆ ನಡೆಸಿ ದ್ವಿಗ್ವಿಜಯ ಸಾಧಿಸಿದ ಪರಿ ನನಗೆ ಸದಾ ಅನುಕರಣೀಯ.