ವಿರಾಟ್ ಬಳಗಕ್ಕೆ ಭಾರತ್ ಆರ್ಮಿ ಬೆಂಬಲ

ಗುರುವಾರ , ಏಪ್ರಿಲ್ 25, 2019
29 °C
ವಿಶ್ವಕಪ್ ಟೂರ್ನಿ: 22 ದೇಶಗಳ ಭಾರತದ ಅಭಿಮಾನಿಗಳು

ವಿರಾಟ್ ಬಳಗಕ್ಕೆ ಭಾರತ್ ಆರ್ಮಿ ಬೆಂಬಲ

Published:
Updated:
Prajavani

ನವದೆಹಲಿ: ಮೇ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆಗುವ ನೆಚ್ಚಿನ ತಂಡಗಳಲ್ಲಿ ಭಾರತವೂ ಒಂದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವನ್ನು ಅದರ ಪಂದ್ಯಗಳಲ್ಲಿ ಹುರಿದುಂಬಿಸಲು ಬೇರೆ ಬೇರೆ ರಾಷ್ಟ್ರಗಳಲ್ಲಿರುವ ಅಭಿಮಾನಿಗಳು ಸಿದ್ಧರಾಗಿದ್ದಾರೆ. ಹೋದ 20 ವರ್ಷಗಳಿಂದ ಭಾರತ ತಂಡವನ್ನು ಹುರಿದುಂಬಿಸುತ್ತಿರುವ ಭಾರತ್ ಆರ್ಮಿ ಈ ಬಾರಿಯೂ ತನ್ನ ಕೆಲಸ ನಿರ್ವಹಿಸಲಿದೆ.

ಒಟ್ಟು 22 ದೇಶಗಳ ಎಂಟು ಸಾವಿರ ಅಭಿಮಾನಿಗಳನ್ನು ಒಂದುಗೂಡಿಸಿರುವ ಆರ್ಮಿಯು ಭಾರತದ ಪ್ರತಿಯೊಂದು ಪಂದ್ಯಗಳಿಗೂ ತೆರಳಿ ಬೆಂಬಲಿಸಲಿದೆ. 1999ರಲ್ಲಿ  ವಿಶ್ವಕಪ್ ಟೂರ್ನಿ ನಡೆದಾಗ ಕೇವಲ ನಾಲ್ಕು ಜನ ಸೇರಿ ಈ ಆರ್ಮಿಯನ್ನು ಆರಂಭಿಸಿದ್ದರು. ಇದೀಗ ಎಂಟು ಸಾವಿರ ಸದಸ್ಯರನ್ನು ದಾಟಿದೆ.

'ವಿಶ್ವಮಟ್ಟದ ಪಂದ್ಯಗಳಾದಾಗ ಭಾರತವನ್ನು ಬೆಂಬಲಿಸುವ ಉದ್ದೇಶ ದಿಂದ ಯುನೈಟೆಡ್ ಕಿಂಗಡಂ ಮೂಲದ ಬೆಂಬಲಿಗರಿಂದ ಶುರುವಾದ ಈ ಭಾರತ್ ಆರ್ಮಿ ಬೆಳೆಯುತ್ತಲೇ ಇದೆ. ಕ್ರಿಕೆಟ್‌ ಪ್ರೀತಿಸುವವರ ಸಮುದಾಯ ಇದು' ಎಂದು ಭಾರತ್ ಆರ್ಮಿಯ ಸ್ಥಾಪಕರಲ್ಲಿ ಒಬ್ಬರಾದ ರಾಕೇಶ್ ಪಟೇಲ್ ಹೇಳಿದ್ದಾರೆ.

‘1990ರಲ್ಲಿ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಮೊದಲ ಬಾರಿಗೆ ಭಾರತ ತಂಡದ ಪಂದ್ಯ ವೀಕ್ಷಿಸಿದೆ. ಆಗಿನಿಂದ ಸಚಿನ್ ತೆಂಡೂಲ್ಕರ್ ಅವರ ಸಂಪೂರ್ಣ ವೃತ್ತಿಜೀವನದ ಪಂದ್ಯಗಳನ್ನು ತಪ್ಪಿಸ ದಂತೆ ನೋಡಿದ್ದೇನೆ. ಅವರ ಕೊನೆಯ ಟೆಸ್ಟ್‌ ಪಂದ್ಯವನ್ನು ನೋಡಲು ಮುಂಬೈಗೂ ಹೋಗಿದ್ದೆ’ ಎಂದು ರಾಕೇಶ್ ನೆನಪುಗಳನ್ನು ಬಿಚ್ಚಿಡುತ್ತಾರೆ.

ಆರ್‌ಸಿಬಿ- ಮ್ಯಾಕ್ಸ್ ಲೈಫ್ ಒಪ್ಪಂದ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ  ಮ್ಯಾಕ್ಸ್ ಲೈಫ್ ವಿಮಾ ಸಂಸ್ಥೆಯು  ವಿಮಾ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಸಿಬಿ ಫ್ರ್ಯಾಂಚೈಸ್‌ ಮುಖ್ಯಸ್ಥ ಸಂಜೀವ್ ಚೂರಿವಾಲಾ, ‘ವಿಮೆ ಮತ್ತು ಆರ್ಥಿಕ ರಕ್ಷಣೆ ಕುರಿತು ಮಾಹಿತಿ ನೀಡುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !