ಗುರುವಾರ , ಮಾರ್ಚ್ 30, 2023
23 °C

ಅಫ್ಗಾನಿಸ್ತಾನ: ಸೇನಾ ಆಸ್ಪತ್ರೆ ಬಳಿ ಅವಳಿ ಸ್ಫೋಟ, ವಿಶೇಷ ಪಡೆಗಳ ನಿಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಂಗಳವಾರ ಸೇನಾ ಆಸ್ಪತ್ರೆ ಬಳಿ ಅವಳಿ ಸ್ಫೋಟ ಸಂಭವಿಸಿವೆ ಎಂದು ತಾಲಿಬಾನ್‌ ಅಧಿಕಾರಿಗಳು ಹೇಳಿದ್ದಾರೆ.

ಅಲ್ಲಿ ಗುಂಡಿನ ದಾಳಿಯನ್ನೂ ಸಹ ಮಾಡಲಾಗಿದೆ ಎಂದು ‍ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

‘ನಾನು ಆಸ್ಪತ್ರೆಯ ಒಳಗಿದ್ದೆ. ಮೊದಲ ಚೆಕ್‌ಪಾಯಿಂಟ್‌ನಿಂದ ದೊಡ್ಡ ಸ್ಫೋಟದ ಸದ್ದೊಂದು ಕೇಳಿಸಿತು. ಸುರಕ್ಷಿತ ಕೊಠಡಿಗಳಿಗೆ ತೆರಳುವಂತೆ ನಮಗೆ ಸೂಚಿಸಲಾಯಿತು. ಬಂದೂಕುಗಳಿಂದ ಗುಂಡು ಹಾರಿಸುತ್ತಿದ್ದುದನ್ನು ನಾನೂ ಸಹ ಕೇಳಿದೆ’ ಎಂದು ಕಾಬೂಲ್‌ನ ಸರ್ದಾರ್‌ ಮೊಹಮ್ಮದ್‌ ದಾವುದ್‌ ಖಾನ್‌ ಆಸ್ಪತ್ರೆಯ ವೈದ್ಯರೊಬ್ಬರು ಆತಂಕ ವ್ಯಕ್ತಪಡಿಸಿದರು. 

ಕೆಲವು ನಿಮಿಷಗಳ ನಂತರ ಸ್ಥಳದಲ್ಲಿ ಎಎಫ್‌ಪಿ ಪತ್ರಕರ್ತರಿಗೆ ಎರಡನೇ ಸ್ಫೋಟದ ಸದ್ದೊಂದು ಕೇಳಿಸಿತು. ಎರಡೂ ಸ್ಫೋಟಗಳನ್ನು ತಾಲಿಬಾನ್‌ ಮಾಧ್ಯಮ ವಕ್ತಾರರೊಬ್ಬರು ಖಚಿತಪಡಿಸಿದ್ದಾರೆ.

‘ಸೇನಾ ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಮೊದಲ ಸ್ಫೋಟ ಸಂಭವಿಸಿದೆ. ಎರಡನೆಯದು ಆಸ್ಪತ್ರೆಯ ಬಳಿ ಉಂಟಾಗಿದೆ. ಇದಿಷ್ಟು ಪ್ರಾಥಮಿಕ ಮಾಹಿತಿಯಾಗಿದ್ದು ಹೆಚ್ಚಿನ ಮಾಹಿತಿಗಳನ್ನು ನಂತರದಲ್ಲಿ ನೀಡುತ್ತೇವೆ’ ಎಂದು ಅವರು ಎಎಫ್‌ಪಿಗೆ ಹೇಳಿದರು.

‘ತಾಲಿಬಾನ್‌ ವಿಶೇಷ ಪಡೆಗಳು ಸ್ಥಳಕ್ಕೆ ತಲುಪಿವೆ. ಸ್ಫೋಟದಿಂದ ಸಾವು–ನೋವು ಸಂಭವಿಸಿದೆ. ಹೆಚ್ಚಿನ ವಿವರಗಳನ್ನು ನಂತರ ಹಂಚಿಕೊಳ್ಳಲಾಗುವುದು’ ಎಂದು ಆಂತರಿಕ ಸಚಿವಾಲಯದ ವಕ್ತಾರ ಕ್ವಾರಿ ಸಯೀದ್‌ ಖೋಸ್ಟಿ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು