ಮಂಗಳವಾರ, ಮಾರ್ಚ್ 2, 2021
23 °C
ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಪದಗ್ರಹಣ

ಅಮೆರಿಕ: 46ನೇ ಅಧ್ಯಕ್ಷರಾಗಿ ಬೈಡನ್‌ ಪ್ರಮಾಣ ಇಂದು ಪ್ರಮಾಣವಚನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರಿ ಭದ್ರತಾ ವ್ಯವಸ್ಥೆ ನಡುವೆ, ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್‌ ಬುಧವಾರ ಅಧಿಕಾರ ಸ್ವೀಕರಿಸುವರು. ಮೊಟ್ಟ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಭಾರತ ಮೂಲದ ಅಮೆರಿಕನ್‌ ಪ್ರಜೆ ಕಮಲಾ ಹ್ಯಾರಿಸ್‌ ಪದಗ್ರಹಣ ಮಾಡುವರು.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗರು ಇತ್ತೀಚೆಗೆ ಕ್ಯಾಪಿಟಲ್‌ ಹಿಲ್ ಮೇಲೆ ನಡೆಸಿದ ದಾಳಿ ವೇಳೆ ಹಿಂಸಾಚಾರ ನಡೆದಿತ್ತು. ಪೊಲೀಸ್‌ ಅಧಿಕಾರಿ ಸೇರಿ ಐವರು ಮೃತಪಟ್ಟಿದ್ದರು. ನೂತನ ಅಧ್ಯಕ್ಷ–ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ದಿನವೂ ಗಲಭೆ ಸಂಭವಿಸುವ ಬಗ್ಗೆ ಗುಪ್ತಚರ ಅಧಿಕಾರಿಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಕ್ಯಾಪಿಟಲ್‌ ಹಿಲ್‌ನ ಪಶ್ಚಿಮ ದ್ವಾರದ ಬಳಿ ನಡೆಯುವ ಸಮಾರಂಭದಲ್ಲಿ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್‌ ಅವರು ಜೋ ಬೈಡನ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸುವರು. ಬೈಡನ್‌ ಅವರು ತಮ್ಮ ಕುಟುಂಬ ಹೊಂದಿರುವ 127 ವರ್ಷ ಹಳೆಯದಾದ ಬೈಬಲ್‌ ಮೇಲೆ ಪ್ರಮಾಣ ಮಾಡುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸುವರು ಎಂದು ಮೂಲಗಳು ಹೇಳಿವೆ.

ಕಮಲಾ ಹ್ಯಾರಿಸ್‌ ಅವರಿಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್‌ ಪ್ರತಿಜ್ಞಾವಿಧಿ ಬೋಧಿಸುವರು ಎಂದು ಇವೇ ಮೂಲಗಳು ಹೇಳಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು