ವಾಷಿಂಗ್ಟನ್: ಭಾರತ-ಅಮೆರಿಕನ್ ವಕೀಲ ರಶದ್ ಹುಸೇನ್ ಅವರನ್ನು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಅಮೆರಿಕ ನೇಮಕ ಮಾಡಿದೆ. ಶ್ವೇತಭವನದ ಪ್ರಕಾರ, ಹುಸೇನ್, ಈ ಪ್ರಮುಖ ಸ್ಥಾನಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ವ್ಯಕ್ತಿಯಾಗಿದ್ದಾರೆ.

41 ವರ್ಷದ ಹುಸೇನ್ ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಸಹಭಾಗಿತ್ವ ಮತ್ತು ಜಾಗತಿಕ ಪಾಲ್ಗೊಳ್ಳುವಿಕೆ ವಿಭಾಗದ ನಿರ್ದೇಶಕರಾಗಿದ್ದಾರೆ.

‘ಇಂದಿನ ಪ್ರಕಟಣೆಯು ಅಮೆರಿಕವನ್ನು ತನ್ನ ತನದಂತೆ ಕಾಣುವ ಮತ್ತು ಎಲ್ಲಾ ನಂಬಿಕೆಗಳ ಜನರನ್ನು ಪ್ರತಿಬಿಂಬಿಸುವ ಆಡಳಿತವನ್ನು ನಿರ್ಮಿಸುವ ಅಧ್ಯಕ್ಷರ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ರಾಯಭಾರಿಯಾಗಿ ಸೇವೆ ಸಲ್ಲಿಸಲು ನಾಮನಿರ್ದೇಶನಗೊಂಡ ಮೊದಲ ಮುಸ್ಲಿಂ ವ್ಯಕ್ತಿ ಹುಸೇನ್.’ಎಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ.

ಅವರು ಈ ಹಿಂದೆ, ನ್ಯಾಯಾಂಗ ಇಲಾಖೆಯ ರಾಷ್ಟ್ರೀಯ ಭದ್ರತಾ ವಿಭಾಗದಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಒಬಾಮಾ ಆಡಳಿತದ ಅವಧಿಯಲ್ಲಿ, ಅವರು ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಅಮೆರಿಕದ ವಿಶೇಷ ರಾಯಭಾರಿಯಾಗಿ ಮತ್ತು ಕಾರ್ಯತಂತ್ರದ ಭಯೋತ್ಪಾದನಾ ನಿಗ್ರಹ ಸಂವಹನಕ್ಕಾಗಿ ಅಮೆರಿಕದ ವಿಶೇಷ ರಾಯಭಾರಿಯಾಗಿ ಹಾಗೂ ವೈಟ್ ಹೌಸ್ ಕೌನ್ಸಿಲ್ನ ಉಪ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ರಾಯಭಾರಿಯಾಗಿ ಅವರು, ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) , ವಿಶ್ವಸಂಸ್ಥೆ, ವಿದೇಶಿ ಸರ್ಕಾರಗಳು ಮತ್ತು ನಾಗರಿಕ ಸಮಾಜದ ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಶಿಕ್ಷಣ, ಉದ್ಯಮಶೀಲತೆ, ಆರೋಗ್ಯ, ಅಂತರಾಷ್ಟ್ರೀಯ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ವಿಸ್ತರಿಸಲು ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.