ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ರಕ್ಷಣಾ ಇಲಾಖೆ ಉನ್ನತ ಹುದ್ದೆಗೆ ರಾಧಾ ಅಯ್ಯಂಗಾರ್‌ ನೇಮಕ

Last Updated 16 ಜೂನ್ 2022, 13:13 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯ ಮೂಲದ ಭದ್ರತಾ ತಜ್ಞೆ ರಾಧಾ ಅಯ್ಯಂಗಾರ್‌ ಪ್ಲಂಬ್‌ ಅವರನ್ನು ಅಮೆರಿಕ‌ದ ರಕ್ಷಣಾ ಇಲಾಖೆಯ (ಪೆಂಟಗನ್‌)ಸ್ವಾಧೀನ ಮತ್ತು ಸುಸ್ಥಿರತೆಯ ರಕ್ಷಣಾ ಉಪ ಅಧೀನ ಕಾರ್ಯದರ್ಶಿ ಹುದ್ದೆಗೆಅಧ್ಯಕ್ಷ ಜೋ ಬೈಡನ್‌ ನೇಮಕ ಮಾಡಿದ್ದಾರೆ.

ರಾಧಾ ಅಯ್ಯಂಗಾರ್ ಪ್ಲಂಬ್‌ ಅವರು ಇದಕ್ಕೆ ಮೊದಲು ಗೂಗಲ್‌ ಕಂಪನಿಯಲ್ಲಿ ನಂಬಿಕೆ ಮತ್ತು ಸುರಕ್ಷತೆಯಲ್ಲಿನ ಸಂಶೋಧನೆ ವಿಭಾಗದ ನಿರ್ದೇಶಕಿಯಾಗಿದ್ದರು. ವ್ಯಾಪಾರ ವಿಶ್ಲೇಷಣೆ, ದತ್ತಾಂಶ ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನೆಯಲ್ಲಿ ಕಾರ್ಯಕಾರಿ ತಂಡಗಳನ್ನು ಮುನ್ನಡೆಸುತ್ತಿದ್ದರು.

ಪ್ಲಂಬ್‌ ಅವರು ಫೇಸ್‌ಬುಕ್‌ನಲ್ಲಿ ನೀತಿ ವಿಶ್ಲೇಷಣೆಯ ಜಾಗತಿಕ ಮುಖ್ಯಸ್ಥೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಿರ್ಣಾಯಕ ಅಂತರರಾಷ್ಟ್ರೀಯ ಭದ್ರತಾ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ ಅವರು ಅಲ್ಲಿ ಕೆಲಸ ಮಾಡಿದ್ದರು.

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬ್ಯಾಚುಲರ್‌ ಆಫ್‌ ಸೈನ್ಸ್‌,ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂಎಸ್‌ ಮತ್ತು ಪಿಎಚ್‌.ಡಿ ಪದವಿ ಪಡೆದಿರುವ ರಾಧಾ ಅವರು, ಪಿಎಚ್‌.ಡಿ ನಂತರದ ಅಧ್ಯಯನ ಕಾರ್ಯವನ್ನುಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿದ್ದಾರೆ. ತಮ್ಮ ವೃತ್ತಿಜೀವನವನ್ನುಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT