ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್ ಬಗ್ಗೆ ಹೊರ ಬಿತ್ತು ಗುಡ್‌ನ್ಯೂಸ್: ಸೋಂಕಿನ ಪ್ರಾಥಮಿಕ ವರದಿಗಳು ಬಹಿರಂಗ

Last Updated 23 ಡಿಸೆಂಬರ್ 2021, 5:06 IST
ಅಕ್ಷರ ಗಾತ್ರ

ವಾಷಿಂಗ್ಟನ್:ಜಗತ್ತಿನಲ್ಲಿ ಆತಂಕ ಸೃಷ್ಟಿಸಿರುವ ಓಮೈಕ್ರಾನ್ ಬಗ್ಗೆ ಜನ ಖುಷಿ ಪಡುವಂತ ಸುದ್ದಿಯೊಂದು ಹೊರ ಬಿದ್ದಿದೆ. ಓಮೈಕ್ರಾನ್ ಅಲೆ ಸೌಮ್ಯವಾಗಿರಲಿದೆ ಎಂದು ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿವಿಧ ಅಧ್ಯಯನ ವರದಿಗಳು ಬಹಿರಂಗಪಡಿಸಿವೆ.

‘ಡೆಲ್ಟಾ ತಳಿಯಷ್ಟು ಓಮೈಕ್ರಾನ್ ತೀವ್ರತೆ ಹೊಂದಿಲ್ಲ. ಶೇ 70 ರಿಂದ 80 ಜನರಿಗೆ ಸೋಂಕು ತಗುಲಿದರೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ 47 ರಷ್ಟು ಆಗಿರುತ್ತದೆ. ಇದರಲ್ಲಿ ವಯಸ್ಸಾದ 100 ಜನರಲ್ಲಿ ಮೂವರಿಗೆ ಸೋಂಕಿನ ತೀವ್ರತೆ ಕಾಡಬಹುದು’ ಎಂದು ವರದಿಗಳು ಹೇಳಿವೆ.

ಸ್ಕಾಟ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪ್ರಕಟಗೊಂಡ ಓಮೈಕ್ರಾನ್ ತೀವ್ರತೆ ಕುರಿತ ಪ್ರಾಥಮಿಕ ವರದಿಗಳು ಇದನ್ನು ಸಾಬೀತುಪಡಿಸಿವೆ.

ಯರೋಪ್‌ನಲ್ಲಿನ ಇವರೆಗಿನ ಓಮೈಕ್ರಾನ್ ಪ್ರಕರಣಗಳನ್ನು ಅಧ್ಯಯನ ಮಾಡಿರುವ ಸ್ಕಾಟ್ಲೆಂಡಿನ ‘ನ್ಯಾಷನಲ್ ಕೋವಿಡ್ ಇನ್ಸಿಡೆಂಟ್‌ ಸಂಸ್ಥೆ’ ಓಮೈಕ್ರಾನ್ ಡೆಲ್ಟಾದಷ್ಟು ಪರಿಣಾಮಕಾರಿ ಅಲ್ಲ. ಇದು ವ್ಯಾಪಕವಾಗಿ ಹರಡಬಹುದು. ಆದರೆ, ಮಾನವನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುವ ಸಾಕ್ಷಿಗಳು ಪ್ರಾಥಮಿಕ ತನಿಖೆಯಲ್ಲಿ ಸಿಕ್ಕಿಲ್ಲ’ ಎಂದು ತಿಳಿಸಿದೆ‌.

ಇನ್ನೊಂದೆಡೆ ದಕ್ಷಿಣ ಆಫ್ರಿಕಾದ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೆಬಲ್ ಡಿಸೀಸ್’ ಕೂಡ ಇದೇ ರೀತಿ ವರದಿ ನೀಡಿದೆ. ಇಲ್ಲಿವರೆಗೆ ಕೈಗೊಂಡ ಅಧ್ಯಯನದಲ್ಲಿ ಓಮೈಕ್ರಾನ್ ಗಂಭೀರ ಸ್ವರೂಪ ಹೊಂದಿಲ್ಲ ಎಂಬುದು ಸಾಬೀತಾಗಿದೆ ಎಂದಿದೆ.

‘ಡೆಲ್ಟಾಗೆ ಹೋಲಿಸಿದರೆ ಓಮೈಕ್ರಾನ್ ತೀವ್ರತೆ ಗಂಭೀರ ಸ್ವರೂಪದ್ದು ಅಲ್ಲ. ಜಗತ್ತಿಗೆ ಇದೊಂದು ಒಳ್ಳೆಯ ಸುದ್ದಿ. ಶೇ 70 ರಿಂದ 80 ಜನರಿಗೆ ಬಾಧಿಸಬಹುದು. ಆದರೆ ತೀವ್ರತೆ ಶೇ 3ಕ್ಕಿಂತ ಕಡಿಮೆ ಇರಲಿದೆ’ ಎಂದು ಸಂಸ್ಥೆಯ ಪ್ರೊ ಚರ್ಲಿ ಚೋಹೆನ್ ಹೇಳಿದ್ದಾರೆ.

ಲಸಿಕಾ ಅಭಿಯಾನ ವ್ಯಾಪಕವಾಗಿ ಆಗಿರುವುದರಿಂದ ಓಮೈಕ್ರಾನ್ ಆರೋಗ್ಯದ ಮೇಲೆ ಮಾಡಬಹುದಾದ ತೀವ್ರತೆ ತಗ್ಗಿರಬಹುದು ಎಂದು ವರದಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT