ಸೋಮವಾರ, ಜೂನ್ 21, 2021
26 °C
ಕೋವಿಡ್‌–19 ನಿಯಂತ್ರಿಸಲು ಎಲ್ಲ ರೀತಿಯ ನೆರವು: ಭಾರತೀಯ–ಅಮೆರಿಕನ್‌ ತಜ್ಞ ವೈದ್ಯರ ಹೇಳಿಕೆ

ಭಾರತದ ರೋಗಿಗಳಿಗೆ ಸೇವೆ ನೀಡಲು ಸಿದ್ಧ: ಎಎಪಿಐ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ‘ಭಾರತದಲ್ಲಿನ ಕೋವಿಡ್‌–19 ರೋಗಿಗಳಿಗೆ ಸ್ವಯಂ ಪ್ರೇರಿತವಾಗಿ ಸೇವೆ ಒದಗಿಸಲು ಸಿದ್ಧರಿದ್ದೇವೆ. ಆದರೆ, ಈಗಿರುವ ತೊಡಕುಗಳನ್ನು ತೆಗೆದುಹಾಕಬೇಕು’ ಎಂದು ಭಾರತ–ಅಮೆರಿಕನ್ನರ ವೈದ್ಯಕೀಯ ತಜ್ಞರು ಆಗ್ರಹಿಸಿದ್ದಾರೆ.

‘ವರ್ಚುವಲ್‌ ಮೂಲಕ ಅಥವಾ ತವರಿಗೆ ಬಂದು ಕೋವಿಡ್‌–19 ರೋಗಿಗಳಿಗೆ ಸೇವೆ ಒದಗಿಸಲು ಸಿದ್ಧ’ ಎಂದು ಈ ವೈದ್ಯರು ತಿಳಿಸಿದ್ದಾರೆ.

‘ಇದರಿಂದಾಗಿ, ಸಾವಿರಾರು ತಜ್ಞ ವೈದ್ಯರು ಲಭ್ಯರಾಗುತ್ತಾರೆ. ಆದರೆ, ಕೆಲವು ಕಾನೂನು ಪ್ರಕ್ರಿಯೆಗಳು ಮತ್ತು ಲೈಸನ್ಸ್‌ಗೆ ಸಂಬಂಧಿಸಿದ ವಿಷಯಗಳಿವೆ. ಇಂತಹ ತೊಡಕುಗಳನ್ನು ಮೊದಲು ನಿವಾರಿಸಬೇಕು’ ಎಂದು ಅವರು ಹೇಳಿದ್ದಾರೆ.

ಭಾರತೀಯ ಮೂಲದ ತಜ್ಞ ವೈದ್ಯರ ಅಮೆರಿಕ ಸಂಘಟನೆ (ಎಎಪಿಐ) ವತಿಯಿಂದ ಈ ಬಗ್ಗೆ ಉಪರಾಷ್ಟ್ರಪತಿ  ವೆಂಕಯ್ಯ ನಾಯ್ಡು ಮತ್ತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರಿಗೆ ಪತ್ರ ಬರೆಯಲಾಗಿದೆ.

‘ಭಾರತಕ್ಕೆ ನೆರವಾಗುವುದು ನಮ್ಮ ನೈತಿಕ ಕರ್ತವ್ಯ. ಸಂಕಷ್ಟದಲ್ಲಿರುವ ನಮ್ಮ ಜನರಿಗೆ ನೆರವಾಗಬೇಕು. ಕ್ಯಾಲಿಫೋರ್ನಿಯಾ ಮತ್ತು ಷಿಕಾಗೊದಿಂದ ತಲಾ 20 ವೈದ್ಯರು ಭಾರತಕ್ಕೆ ತೆರಳಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ’ ಎಂದು ಎಎಪಿಐ ತಿಳಿಸಿದೆ.

ಕೋವಿಡ್‌–19 ನಿಯಂತ್ರಣಕ್ಕೆ ಭಾರತಕ್ಕೆ ನೆರವಾಗಲು ಎಎಪಿಐ 26 ಲಕ್ಷ ಡಾಲರ್‌ (₹19.23 ಕೋಟಿ) ಮೊತ್ತವನ್ನು ಸಂಗ್ರಹಿಸಿದೆ.

ಜತೆಗೆ, 1000 ಆಮ್ಲಜನಕ ಉತ್ಪಾದನಾ ಕಾನ್ಸ್‌ನ್‌ಟ್ರೇಟರ್‌ಗಳನ್ನು ಈಗಾಗಲೇ ಎಎಪಿಐ ಕಳುಹಿಸಿದೆ. ಮತ್ತೆ ಇನ್ನೂ 1000 ಕಳುಹಿಸಲು ಸಿದ್ಧತೆ ನಡೆಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು