ವಾಷಿಂಗ್ಟನ್: ವಂಚನೆ ತಡೆಯುವ ಪ್ರತಿನಿಧಿಗಳ ಸೋಗಿನಲ್ಲಿ ಹಿರಿಯ ನಾಗರಿಕರಿಗೆ ₹17.03 ಕೋಟಿ(2.3 ದಶಲಕ್ಷ ಡಾಲರ್) ವಂಚಿಸಿದ ಆರೋಪದ ಮೇಲೆ ನ್ಯೂಜರ್ಸಿಯಲ್ಲಿರುವ ಭಾರತೀಯ ಪ್ರಜೆಯೊಬ್ಬರನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ.

ಆಶಿಶ್ ಬಜಾಜ್(28) ಬಂಧಿತರು. ಇವರನ್ನು ಉತ್ತರ ಕೊರೊಲಿನಾದ ಜಿಲ್ಲಾ ನ್ಯಾಯಾಲದಲ್ಲಿ ನ್ಯಾಯಾಧೀಶ ಜೋಯೆ ಎಲ್.ವೆಬ್ಸ್ಟಾರ್ ಎದುರು ಹಾಜರುಪಡಿಸಲಾಯಿತು. ಗರಿಷ್ಠ 20 ವರ್ಷಗಳ ಜೈಲು ಶಿಕ್ಷೆ ಮತ್ತು ₹1.85 ಕೋಟಿ (2.5 ಲಕ್ಷ ಡಾಲರ್) ದಂಡ ವಿಧಿಸಬಹುದಾದಂತಹ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

ಆರೋಪಿ ಬಜಾಜ್ ಅವರು ಏಪ್ರಿಲ್ 2020 ರಿಂದ ಜುಲೈ 2021 ರವರೆಗೆ, ತನ್ನ ಸಹ-ಸಂಚುಗಾರರೊಂದಿಗೆ ಅಮೆರಿಕದಲ್ಲಿರುವ ಬ್ಯಾಂಕುಗಳಿಂದ ವಂಚನೆ ತಡೆಗಟ್ಟುವ ಪ್ರತಿನಿಧಿಗಳ ಸೋಗಿನಲ್ಲಿ ಕನಿಷ್ಠ ₹17.03 ಕೋಟಿಯಷ್ಟು ಹಣವನ್ನು ವಂಚಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.