ಬುಧವಾರ, ನವೆಂಬರ್ 30, 2022
16 °C

ವಂಚನೆ: ಭಾರತ ಮೂಲದ ವ್ಯಕ್ತಿಗೆ ಜೈಲು

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಭಾರತ ಮೂಲದ 27 ವರ್ಷದ ಗೌರವ್‌ಜಿತ್‌ ರಾಜ್‌ ಸಿಂಗ್‌ ಎಂಬಾತನಿಗೆ ವಂಚನೆ ಪ್ರಕರಣದಲ್ಲಿ ಅಮೆರಿಕದ ಜಿಲ್ಲಾ ನ್ಯಾಯಾಲಯವು ಗುರುವಾರ ನಾಲ್ಕು ವರ್ಷಗಳ ಜೈಲುವಾಸದ ಸಜೆ ನೀಡಿದೆ. ಪಿಪಿಇ ಕಿಟ್‌ ನೀಡುವುದಾಗಿ ನಂಬಿಸಿ, ವಂಚಿಸಿದ ಆರೋಪ ಸೇರಿದಂತೆ ವಿವಿಧ ವಂಚನೆ ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದವು.

ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದ 2020ರ ಮೇನಲ್ಲಿ, 15 ಲಕ್ಷ ಪಿಪಿಇ ಕಿಟ್‌ಗಳನ್ನು ₹16 ಕೋಟಿಗೆ ಪೂರೈಸುವುದಾಗಿ ಸಿಂಗ್‌ ಹಲವರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಇವರಲ್ಲಿ 10 ಮಂದಿಯಿಂದ ಮುಂಗಡವಾಗಿ ₹71 ಲಕ್ಷವನ್ನೂ ಸಿಂಗ್‌ ಪಡೆದುಕೊಂಡಿದ್ದರು.

ಹಣ ಪಾವತಿಯಾದ ನಂತರ ಕಿಟ್‌ ತಲುಪದಿದ್ದರ ಕುರಿತು ಹಲವರು ವಿಚಾರಿಸಿದ್ದಾರೆ. ಕಿಟ್ ತಲುಪದಿದ್ದಕ್ಕೆ ಹಲವಾರು ಕಾರಣಗಳನ್ನು ಸಿಂಗ್‌ ಹೇಳಿದ್ದಾರೆ. ನಂತರ ವಂಚನೆಗೆ ಒಳಗಾದವರು ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು