ಮಂಗಳವಾರ, ನವೆಂಬರ್ 24, 2020
22 °C
ಮಿಷಿಗನ್ ಕ್ಷೇತ್ರದಿಂದ ಅಮೆರಿಕದ ಪ್ರತಿನಿಧಿ ಸಭೆಗೆ ಶ್ರೀಥಾಣೇದಾರ ಆಯ್ಕೆ

ಅಮೆರಿಕ ಚುನಾವಣೆ: ಬೆಳಗಾವಿ ಮೂಲದ ಉದ್ಯಮಿ ಶ್ರೀಥಾಣೇದಾರ ಅವರಿಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೂಸ್ಟನ್: ಕರ್ನಾಟಕದ ಬೆಳಗಾವಿ ಮೂಲದ ಅಮೆರಿಕ ನಿವಾಸಿ, ಶ್ರೀಮಂತ ಉದ್ಯಮಿ ಡೆಮಾಕ್ರಟಿಕ್ ಪಕ್ಷದ ಶ್ರೀಥಾಣೇದಾರ ಅವರು ಶೇ 93ರಷ್ಟು ಮತಗಳನ್ನು ಪಡೆಯುವ ಮೂಲಕ ಮಿಷಿಗನ್‌ ಕ್ಷೇತ್ರದಿಂದ ಅಮೆರಿಕದ  ಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.

65ರ ಹರೆಯದ ವಿಜ್ಞಾನಿ ಮತ್ತು ಉದ್ಯಮಿ ಶ್ರೀಥಾಣೇದಾರ ಅವರು ಎರಡು ವರ್ಷಗಳ ಹಿಂದೆ ರಾಜ್ಯಪಾಲರ ಹುದ್ದೆಗೆ ಸ್ಪರ್ಧಿಸಿದ್ದರು.

ಥಾಣೇದಾರ ಅವರು, ಮುಂಬೈ ವಿಶ್ವವಿದ್ಯಾಲಯದಿಂದ ರಸಾಯನವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ 1979ರಲ್ಲಿ ಅಮೆರಿಕಕ್ಕೆ ತೆರಳಿದ ಅವರು ಅಕ್ರೋನ್ ವಿಶ್ವವಿದ್ಯಾಲಯ ಮತ್ತು ಮಿಷಿಗನ್‌ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು