ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾ ಮಂಗೇಶ್ಕರ್‌ ಗಾಯನ ಮೋಡಿ ಶಾಶ್ವತ: ಪಾಕಿಸ್ತಾನ ಸಚಿವ

Last Updated 6 ಫೆಬ್ರುವರಿ 2022, 9:05 IST
ಅಕ್ಷರ ಗಾತ್ರ

ಇಸ್ಲಮಾಬಾದ್‌: ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪಾಕಿಸ್ತಾನ ಸಚಿವ ಫವಾದ್‌ ಚೌದರಿ ಅವರು, 'ತಮ್ಮ ಧ್ವನಿಯಿಂದ ದಶಕಗಳ ಕಾಲ ಸಂಗೀತ ಜಗತ್ತನ್ನು ಆಳಿದರು. ಲತಾ ಅವರ ಗಾಯನ ಮೋಡಿ ಶಾಶ್ವತವಾಗಿರಲಿದೆ' ಎಂದರು.

'ಲತಾ ಮಂಗೇಶ್ಕರ್‌ ಅವರ ನಿಧನವು ಸಂಗೀತ ಲೋಕದ ಒಂದು ಯುಗಾಂತ್ಯದ ಕುರುಹಾಗಿದೆ. ಲತಾ ಅವರು ಸಂಗೀತ ಲೋಕವನ್ನು ದಶಕಗಳ ಕಾಲ ತಮ್ಮ ಸ್ವರದ ಮೂಲಕ ಆಳಿದರು. ಅವರ ಗಾಯನ ಮೋಡಿಯು ಎಂದಿಗೂ ಶಾಶ್ವತವಾಗಿ ಉಳಿಯುತ್ತದೆ' ಎಂದು ಚೌದರಿ ಅವರು ಉರ್ದುವಿನಲ್ಲಿ ಟ್ವೀಟ್‌ ಮಾಡಿದ್ದಾರೆ.

'ಎಲ್ಲೆಲ್ಲ ಉರ್ದು ಮಾತನಾಡುತ್ತಾರೆಯೋ ಹಾಗೂ ಅರ್ಥೈಸಿಕೊಳ್ಳುತ್ತಾರೆಯೋ ಅಲ್ಲೆಲ್ಲ ಜನರು ಲತಾ ಮಂಗೇಶ್ಕರ್‌ ಅವರಿಗೆ ವಿದಾಯ ಹೇಳುತ್ತಿದ್ದಾರೆ' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇಂಗ್ಲಿಷ್‌ನಲ್ಲಿ ಪ್ರತ್ಯೇಕವಾಗಿ ಟ್ವೀಟ್‌ ಮಾಡಿರುವ ಚೌದರಿ ಅವರು, 'ಸಂಗೀತ ಲೋಕದ ದಂತಕಥೆ ಇನ್ನಿಲ್ಲ. ಲತಾ ಮಂಗೇಶ್ಕರ್‌ ಅವರು ದಶಕಗಳ ಸಂಗೀತ ಪ್ರಪಂಚವನ್ನು ಆಳಿದ ಸುಮಧುರ ಕಂಠದ ರಾಣಿ. ಸಂಗೀತ ಕ್ಷೇತ್ರಕ್ಕೆ ಕಿರೀಟವಿಲ್ಲದ ರಾಣಿಯಾಗಿದ್ದರು. ಮುಂಬರುವ ದಿನಗಳಲ್ಲೂ ಜನರ ಹೃದಯದಲ್ಲಿ ಲತಾ ಅವರ ಗಾಯನ ಗುನುಗುತ್ತಿರುತ್ತದೆ' ಎಂದಿದ್ದಾರೆ.

ಪ್ರಸ್ತುತ ಬೀಜಿಂಗ್‌ನಲ್ಲಿ ಸಚಿವ ಚೌದರಿ ಅವರು ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಚೀನಾ ಪ್ರವಾಸದಲ್ಲಿದ್ದಾರೆ.

ಪಾಕಿಸ್ತಾನದ ಸರ್ಕಾರಿ ಪ್ರಾಯೋಜಿತ ಟಿವಿಯಲ್ಲಿ ಲತಾ ಮಂಗೇಶ್ಕರ್‌ ಅವರ ನಿಧನ ಮತ್ತು ಅವರ ಸಂಗೀತ ಜೀವನ ಪಯಣವನ್ನು ಪ್ರಸಾರ ಮಾಡುತ್ತಿದೆ.

92 ವರ್ಷದ ಲತಾ ಅವರು ಭಾನುವಾರ ಬೆಳಗ್ಗೆ 8.12ಕ್ಕೆ ನಿಧನರಾದರು. ಕೋವಿಡ್‌–19 ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಜನವರಿ 8ರಂದು ದಾಖಲಾಗಿದ್ದರು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT