ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿ: ಇಸ್ಕಿಯಾ ದ್ವೀಪದಲ್ಲಿ ಪರ್ವತದ ಮಣ್ಣು ಕುಸಿತ– ಶಿಶು ಸೇರಿ 7 ಮಂದಿ ಸಾವು

Last Updated 28 ನವೆಂಬರ್ 2022, 2:32 IST
ಅಕ್ಷರ ಗಾತ್ರ

ಮಿಲನ್: ಇಟಲಿಯ ಇಸ್ಕಿಯಾ ದ್ವೀಪದಲ್ಲಿ ಪರ್ವತದ ಮಣ್ಣು ಕುಸಿದಿದ್ದು, ಮೂರು ವಾರದ ನವಜಾತ ಶಿಶು ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಎಲ್ಲ ಏಳು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ.

ಇನ್ನೂ 5 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ. ನೇಪಲ್ಸ್‌ನ ಕಸಾಮಿಚ್ ನಗರದಲ್ಲಿ ಘಟನೆ ನಡೆದಿದೆ.

ಪರ್ವತದ ಮಣ್ಣು ಕುಸಿತದ ರಭಸಕ್ಕೆ ಕಟ್ಟಡಗಳು ಉರುಳಿದ್ದು, ವಾಹನಗಳು ಸಮುದ್ರಕ್ಕೆ ದೂಡಲ್ಪಟ್ಟಿವೆ.

ಮೃತರಲ್ಲಿ 5 ವರ್ಷದ ಹೆಣ್ಣು ಮಗು, 11 ವರ್ಷದ ಆಕೆಯ ಸಹೋದರ, 31 ವರ್ಷದ ಇಸ್ಕಿಯಾ ದ್ವೀಪದ ನಿವಾಸಿ ಮತ್ತು ಬಲ್ಗೇರಿಯಾದ ಪ್ರವಾಸಿಗರೊಬ್ಬರು ಸೇರಿದ್ದಾರೆ.

‘ಅಪಘಾತದ ಸ್ಥಳದಲ್ಲಿ ಸಂಪೂರ್ಣ ಕೆಸರು ಮತ್ತು ನೀರು ತುಂಬಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ’ಎಂದು ಅಗ್ನಿಶಾಮಕ ದಳದ ಅಧಿಕಾರಿ ಲೂಕಾ ಕ್ಯಾರಿ ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಪರ್ವತದ ಒಂದು ಭಾಗವು ಸಡಿಲಗೊಂಡು ಕುಸಿತ ಸಂಭವಿಸಿದೆ. ಮತ್ತೆ ಭೂಕುಸಿತದ ಅಪಾಯಗಳಿದ್ದು, ರಕ್ಷಣಾ ತಂಡ ಕಾಲ್ನಡಿಗೆಯಲ್ಲಿ ಶೋಧಕ್ಕೆ ಮುಂದಾಗಿದೆ.

ರಸ್ತೆ ತೆರವು ಮಾಡಿ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಣ್ಣ ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ. ಸಮುದ್ರಕ್ಕೆ ದೂಡಲ್ಪಟ್ಟಿರುವ ಕಾರುಗಳ ಶೋಧಕ್ಕೆ ಮುಳುಗು ತಜ್ಞರನ್ನು ಕರೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT