ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಪಕ್ಸ ಸಹೋದರರ, ಪ್ರಭಾವಿಗಳ ವಿದೇಶ ಪ್ರಯಾಣದ ಮೇಲೆ ನಿರ್ಬಂಧಕ್ಕೆ ಮನವಿ

ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಕ್ರೀಡಾಪುಟಗಳು, ಉದ್ಯಮಿಗಳು
Last Updated 12 ಜುಲೈ 2022, 12:31 IST
ಅಕ್ಷರ ಗಾತ್ರ

ಕೊಲಂಬೊ: ರಾಜಪಕ್ಸ ಸಹೋದರರು ಹಾಗೂ ಈ ಹಿಂದಿನ ಸರ್ಕಾರದಲ್ಲಿದ್ದ ಕೆಲ ಪ್ರಭಾವಿ ಅಧಿಕಾರಿಗಳು ದೇಶ ತೊರೆಯುವುದನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿ ಶ್ರೀಲಂಕಾದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

‘ಅರ್ಜಿಯಲ್ಲಿ ಹೆಸರಿಸಲಾಗಿರುವ ಕೆಲವರು ದೇಶ ತೊರೆಯಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ, ಅರ್ಜಿಯ ತುರ್ತು ವಿಚಾರಣೆ ಅಗತ್ಯವಿದ್ದು, ಜುಲೈ 14ರಂದು ವಿಚಾರಣೆ ನಡೆಸಬೇಕು ಎಂಬುದಾಗಿ ಅರ್ಜಿದಾರರು ಕೋರಿದ್ದಾರೆ’ ಎಂದು ಸ್ಥಳೀಯ ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.

ಈಜುಪಟು ಹಾಗೂ ತರಬೇತುದಾರ ಜೂಲಿಯನ್ ಬೊಲಿಂಗ್, ಸಿಲೋನ್‌ ವಾಣಿಜ್ಯ ಸಂಸ್ಥೆಯ ಮಾಜಿ ಚೇರಮನ್ ಚಂದ್ರ ಜಯರತ್ನೆ, ಉದ್ಯಮಿ ಜೆಹಾನ್‌ ಕನಗರತ್ನೆ ಹಾಗೂ ಇತರರು ಅರ್ಜಿ ಸಲ್ಲಿಸಿದ್ದಾರೆ.

ದೇಶ ತೊರೆಯಲು ಮುಂದಾಗಿದ್ದ, ಮಾಜಿ ಹಣಕಾಸು ಸಚಿವ ಬಸಿಲ್‌ ರಾಜಪಕ್ಸ ಅವರನ್ನು ಕೊಲಂಬೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT