ಭಾನುವಾರ, ಏಪ್ರಿಲ್ 11, 2021
26 °C
ಪರಿಸರ, ಇಂಧನ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಪರಿಗಣಿಸಿ ಆಯ್ಕೆ

‘ಸೆರಾವೀಕ್‌ ನಾಯಕತ್ವ’ ಪ್ರಶಸ್ತಿಗೆ ಮೋದಿ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸೆರಾವೀಕ್‌ ಗ್ಲೋಬಲ್‌ ಎನರ್ಜಿ ಆ್ಯಂಡ್‌ ಎನ್ವಿರಾನ್‌ಮೆಂಟ್‌ ಲೀಡರ್‌ಷಿಪ್‌’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾರ್ಚ್‌ 1ರಿಂದ 5ರ ವರೆಗೆ ಆನ್‌ಲೈನ್‌ ಮೂಲಕ ನಡೆಯಲಿರುವ ಸೆರಾವೀಕ್‌ ಕಾನ್ಫರೆನ್ಸ್‌–2021ರಲ್ಲಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟನಾ ಸಂಸ್ಥೆ ಐಎಚ್‌ಎಸ್‌ ಮರ್ಕಿಟ್‌ ತಿಳಿಸಿದೆ.

‘ಪರಿಸರ ಹಾಗೂ ಇಂಧನ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಕ್ಷೇತ್ರಕ್ಕೆ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಡ್ರವಾದ ಭಾರತದ ಪ್ರಧಾನಿಯಾಗಿ ಮೋದಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ಕ್ಷೇತ್ರದ ನಾಯಕತ್ವವನ್ನು ಅವರು ಸಮರ್ಥವಾಗಿ ನಿರ್ವಹಿಸುವರು ಎಂಬ ವಿಶ್ವಾಸ ಇದೆ. ಅವರು ಹೊಂದಿರುವ ಬದ್ಧತೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಸಂಸ್ಥೆಯ ವೈಸ್‌ಚೇರ್ಮನ್‌ ಡೇನಿಯಲ್‌ ಯೆರ್ಗಿನ್‌ ತಿಳಿಸಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್‌ ಕೆರ‍್ರಿ, ಬಿಲ್‌ ಮತ್ತು ಮಿಲಿಂಡಾ ಗೇಟ್ಸ್‌ ಪ್ರತಿಷ್ಠಾನದ ಸಹ ಅಧ್ಯಕ್ಷ ಬಿಲ್‌ ಗೇಟ್ಸ್‌, ಸೌದಿ ಆರಾಮ್ಕೊ ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಅಮಿನ್‌ ನಾಸೆರ್‌ ಈ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಲಿರುವ ಪ್ರಮುಖರು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು