ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟಿಯಲ್ಲಿ ಖಾಸಗಿ ವಿಮಾನ ಪತನ; ಅಮೆರಿಕದ ಇಬ್ಬರು ಸೇರಿದಂತೆ 6 ಮಂದಿ ಸಾವು

Last Updated 4 ಜುಲೈ 2021, 4:39 IST
ಅಕ್ಷರ ಗಾತ್ರ

ಪೋರ್ಟ್-ಒ-ಪ್ರಿನ್ಸ್ (ಹೈಟಿ): ಹೈಟಿಯಲ್ಲಿ ನಡೆದ ಖಾಸಗಿ ವಿಮಾನ ಅಪಘಾತದಲ್ಲಿ ಅಮೆರಿಕದ ಇಬ್ಬರು ಧರ್ಮಪ್ರಚಾಕರು ಸೇರಿದಂತೆ ಎಲ್ಲ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೈಟಿಯ ನೈಋತ್ಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್ (Port-au-Prince)ನಲ್ಲಿ ವಿಮಾನ ದುರ್ಘಟನೆ ನಡೆದಿದೆ. ಪೋರ್ಟ್-ಒ-ಪ್ರಿನ್ಸ್ ವಿಮಾನ ನಿಲ್ದಾಣದಿಂದ ದಕ್ಷಿಣ ಕರಾವಳಿ ನಗರವಾದ ಜಾಕ್ಮೆಲ್‌ಗೆ ಹೋಗುವಾಗಸಣ್ಣ ಗಾತ್ರದ ವಿಮಾನ ಪತನಗೊಂಡಿದೆ ಎಂದು ರಾಷ್ಟ್ರೀಯ ನಾಗರಿಕ ವಿಮಾನಯಾನ ಕಚೇರಿ (ಎನ್‌ಸಿಎಒ) ವರದಿಯನ್ನು ಮಿಯಾಮಿ ಹೆರಾಲ್ಡ್ ಪ್ರಕಟಿಸಿದೆ.

ತಕ್ಷಣಕ್ಕೆ ವಿಮಾನ ದುರ್ಘಟನೆಯ ಹಿಂದಿನ ನಿಖರ ಕಾರಣಗಳು ತಿಳಿದು ಬಂದಿಲ್ಲ.

ಅಮೆರಿಕದ ಧರ್ಮಪ್ರಚಾರಕರಾದ ಹಾಸ್ಟೆಲ್ಟರ್ (35) ಮತ್ತು ಜಾನ್ ಮಿಲ್ಲರ್ (43) ಮೃತಪಟ್ಟಿದ್ದಾರೆ ಎಂಬುದನ್ನು ದೃಢೀಕರಿಸಲಾಗಿದೆ. ಇತರೆ ನಾಲ್ವರ ಗುರುತನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ.

ಇದಕ್ಕೂ ಮೊದಲಿನ ವಿಮಾನದಲ್ಲಿ ಹಾಸ್ಟೆಲ್ಟರ್ ಅವರ ಪತ್ನಿ ಹಾಗೂ ಮೂವರು ಮಕ್ಕಳು ಪ್ರಯಾಣಿಸಿದ್ದರು. ಆದರೆ ಲಘು ವಿಮಾನದಲ್ಲಿ ಸ್ಥಳವಿಲ್ಲದ ಕಾರಣ ಅನಂತರದ ವಿಮಾನದಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದರು.

ಪೋರ್ಟ್-ಒ-ಪ್ರಿನ್ಸ್ ಪ್ರದೇಶದಲ್ಲಿ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರು ಆ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ ಎಂಬುದು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT