ಬುಧವಾರ, ಮೇ 25, 2022
29 °C

ಸಿಂಗಪುರ: ಓಮೈಕ್ರಾನ್‌ ಉಪತಳಿ ‘ಬಿಎ.2’ ಪ್ರಕರಣಗಳು ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಸಿಂಗಪುರದಲ್ಲಿ ಈಚೆಗೆ ವರದಿಯಾಗಿರುವ 198 ಕೋವಿಡ್‌ ಪ್ರಕರಣಗಳಲ್ಲಿ ರೂಪಾಂತರೆ ತಳಿ ಓಮೈಕ್ರಾನ್‌ ಉಪತಳಿ ‘ಬಿಎ.2’ ಸೋಂಕಿನ ಪ್ರಕರಣಗಳೂ ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ.

‘ಬಿಎ.1’ಗೆ ಹೋಲಿಸಿದರೆ, ‘ಬಿಎ.2’ ಉಪತಳಿ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿರುವುದು ಕಂಡುಬಂದಿದೆ. ನಿತ್ಯ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ ಎಂದು ಮೂಲಗಳು ಹೇಳಿವೆ.

ವರದಿಯಾದ 198 ಪ್ರಕರಣಗಳಲ್ಲಿ 150 ಪ್ರಕರಣಗಳು ‘ಬಿಎ.2’ ಸೋಂಕಿನವು. ವಿದೇಶಗಳಿಂದ ಬಂದವರಿಂದ ಈ ಸೋಂಕು ಕಾಣಿಸಿಕೊಂಡಿದೆ. ಉಳಿದ 48 ಪ್ರಕರಣಗಳು ಜನವರಿ 25 ರಿಂದ ಸ್ಥಳೀಯ ಮಟ್ಟದಲ್ಲಿ ವರದಿಯಾದವುಗಳಾಗಿವೆ ಎಂದು ಟುಡೇ ಪತ್ರಿಕೆ ವರದಿ ಮಾಡಿದೆ. 

ಬಿಎ.2 ಸೋಂಕಿನ ತೀವ್ರತೆ ಹಾಗೂ ರೋಗನಿರೋಧಕ ಶಕ್ತಿಯಿಂದ ಪಾರಾಗಬಲ್ಲ ಸಾಮರ್ಥ್ಯದ ಕುರಿತು ಸ್ವತಂತ್ರ ಅಧ್ಯಯನದ ಅಗತ್ಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು