ಭಾನುವಾರ, ಅಕ್ಟೋಬರ್ 17, 2021
23 °C

ಮೌಲ್ಯಗಳೊಂದಿಗೆ‘ ಬೆಸೆದುಕೊಂಡಿದೆ ಅಮೆರಿಕ–ಭಾರತದ ಸಂಬಂಧ: ತರಂಜಿತ್ ಸಂಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಅಹಿಂಸೆ ಮತ್ತು ಕಾನೂನಿನ ನಿಯಮಗಳ ತಳಹದಿ ಮೇಲೆ ಬಲವಾಗಿ ಬೆಸೆಯಲಾಗಿದೆ ಎಂದು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್‌ ಸಿಂಗ್ ಸಿಂಧು ಹೇಳಿದರು.

ಇಲ್ಲಿನ ಹೋವರ್ಡ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಕಿಂಗ್ ಗಾಂಧಿ ಲೆಕ್ಚರ್‌‘ನಲ್ಲಿ ಉಪನ್ಯಾಸ ನೀಡಿದ ಅವರು,  ಭಾರತ ಮತ್ತು ಅಮೆರಿಕವನ್ನು ಸಂಪರ್ಕಿಸುವ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಅಹಿಂಸೆ ಮತ್ತು ಕಾನೂನು ಸಂಬಂಧಿತ ಎಳೆಗಳು ಬಲವಾಗಿವೆ. ಇಂಥ ಮೌಲ್ಯಗಳ ತಳಹದಿ ಮೇಲೆ ಭಾರತ-ಅಮೆರಿಕ ಸಂಬಂಧಗಳ ಸೌಧವು ನಿರ್ಮಾಣವಾಗಿದೆ ಎಂದರು.

ಭಾರತ ಸ್ವತಂತ್ರಗೊಳ್ಳುವ ಮುನ್ನ, ಲಾಲಾ ಲಜಪತ್ ರಾಯ್, ಸರೋಜಿನಿ ನಾಯ್ಡು, ರವೀಂದ್ರನಾಥ ಟ್ಯಾಗೋರ್, ಬಿ. ಆರ್. ಅಂಬೇಡ್ಕರ್‌ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು ಹೋವರ್ಡ್  ಸೇರಿದಂತೆ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದರು ಎಂದು ಸಂಧು ಹೇಳಿದರು.

1958ರಲ್ಲಿ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ರಿಲೀಜಿಯನ್‌ನ ಡೀನ್‌ ಡಾ.ವಿಲಿಯಂ ಸ್ಟುವರ್ಟ್‌ ನೆಲ್ಸನ್‌ ಅವರು ಗಾಂಧಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮ ಆರಂಭಿಸಿದ್ದರು. 1963 ಮತ್ತು 1966ರಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್ ಜ್ಯೂನಿಯರ್‌ ಅವರು ಇಲ್ಲಿ ಉಪನ್ಯಾಸ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು