ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರೀ ನಷ್ಟದ ನಂತರ ಹೊಸ ಪಡೆಗಳನ್ನು ಕಳುಹಿಸುತ್ತಿರುವ ರಷ್ಯಾ: ಉಕ್ರೇನ್ ಅಧ್ಯಕ್ಷ

Last Updated 12 ಮಾರ್ಚ್ 2022, 13:25 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿರುವ ರಷ್ಯಾಗೆ ಭಾರೀ ನಷ್ಟವಾಗಿದೆ. ಆ ಹಿನ್ನೆಲೆಯಲ್ಲಿ ಹೊಸ ಪಡೆಗಳನ್ನು ರಷ್ಯಾ ಕಳುಹಿಸುತ್ತಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಮೆಲಿಟೊಪೋಲ್ ನಗರದ ಮೇಯರ್‌ ಅವರನ್ನು ರಷ್ಯಾ ಅಪಹರಿಸಿದೆ ಎಂದು ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ಈ ಕುರಿತು ಟಿವಿಯಲ್ಲಿ ಮಾತನಾಡಿರುವ ಅವರು, ‘ಮೆಲಿಟೊಪೋಲ್‌ ಮೇಯರ್‌ ಅವರನ್ನು ರಷ್ಯಾ ಬಿಡುಗಡೆ ಮಾಡಬೇಕು. ಈ ವಿಚಾರದಲ್ಲಿ ರಷ್ಯಾ ಮೇಲೆ ಒತ್ತಡ ಹೇರಲು ಜರ್ಮನ್‌ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಹಾಗೂ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದ್ದೇನೆ’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ಇದೇ ವೇಳೆ, ಮಾರಿಯುಪೋಲ್‌ನಲ್ಲಿ ಕದನ ವಿರಾಮವನ್ನು ಎತ್ತಿಹಿಡಿಯುವಂತೆಯೂ ಝೆಲೆನ್‌ಸ್ಕಿ ರಷ್ಯಾವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT