ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಿಂದ ಹೈಟಿಗೆ ಆಧುನಿಕ ಶಸ್ತ್ರಾಸ್ತ್ರ ಕಳ್ಳಸಾಗಣೆ: ವಿಶ್ವಸಂಸ್ಥೆ

Last Updated 4 ಮಾರ್ಚ್ 2023, 11:23 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಎಪಿ): ‘ಅಮೆರಿಕದಿಂದ ಹಾಗೂ ವಿಶೇಷವಾಗಿ ಫ್ಲಾರಿಡಾದಿಂದ ಹೈಟಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ’ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

‘ಅಮೆರಿಕದಲ್ಲಿ ನೆಲೆಸಿರುವ ಹೈಟಿ ಮೂಲದ ಅಪರಾಧಿಗಳನ್ನು ಒಳಗೊಂಡ ಜಾಲವೊಂದು ಈ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ. ಈ ಶಸ್ತ್ರಾಸ್ತ್ರಗಳನ್ನು ನೆರೆಯ ಡೊಮಿನಿಕನ್ ರಿಪಬ್ಲಿಕ್‌ನಿಂದ ಸಮುದ್ರ ಮಾರ್ಗದ ಮೂಲಕ ಹಾಗೂ ಕೆಲವೊಮ್ಮೆ ವಿಮಾನದ ಮೂಲಕ ಸಾಗಿಸಲಾಗುತ್ತದೆ’ ಎಂದು ಮಾದಕವಸ್ತು ಮತ್ತು ಅಪರಾಧಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಕಚೇರಿ ಹೇಳಿದೆ.

‘ಬಂದರುಗಳು, ಹೆದ್ದಾರಿಗಳು, ಮೂಲಸೌಕರ್ಯಗಳು, ಕಸ್ಟಮ್ಸ್‌ ಕಚೇರಿಗಳು, ಪೊಲೀಸ್‌ ಠಾಣೆಗಳು, ಬಂದಿಖಾನೆಗಳನ್ನು ಗುರಿಯಾಗಿಸಿ ಈ ಶಸ್ತ್ರಸಜ್ಜಿತ ಗುಂಪುಗಳು ದಾಳಿ ನಡೆಸುತ್ತವೆ. ಕಳೆದ ವರ್ಷ ಅಧಿಕ ಸಂಖ್ಯೆಯ ಅಪರಾಧ ಪ್ರಕರಣಗಳು ದಾಖಲಾಗಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT