ಬುಧವಾರ, ಅಕ್ಟೋಬರ್ 21, 2020
24 °C

ಅಮೆರಿಕ: ಕೌಶಲ ವೃದ್ಧಿ ತರಬೇತಿಗೆ ₹ 1100 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್ : ಆರ್ಥಿಕ ವ್ಯವಸ್ಥೆಯ ಪ್ರಮುಖ ಕ್ಷೇತ್ರಗಳಲ್ಲಿ ಎಚ್-1ಬಿ ವೀಸಾ ಹೊಂದಿರುವ ಮಧ್ಯಮದಿಂದ ಉನ್ನತ ಕೌಶಲದ ಉದ್ಯೋಗಿಗಳಿಗೆ ಉನ್ನತಮಟ್ಟದ ತರಬೇತಿ ನೀಡಲು ಅಮರಿಕ ಸುಮಾರು ₹ 1100 ಕೋಟಿ ಹೂಡಿಕೆಯನ್ನು ಪ್ರಕಟಿಸಿದೆ.

ಈ ಕ್ಷೇತ್ರಗಳಲ್ಲಿ ಪ್ರಮುಖವಾಗಿ ತಂತ್ರಜ್ಞಾನ, ಸೈಬರ್ ಸುರಕ್ಷೆ, ಅತ್ಯಾಧುನಿಕ ಉತ್ಪಾದನಾ ವಲಯ, ಸಾರಿಗೆ ಸೇವೆ ಇವೆ. ಇಲ್ಲಿ ಎಚ್-1ಬಿ ವೀಸಾ ಹೊಂದಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಈ ಸಿಬ್ಬಂದಿಯ ಕೌಶಲವನ್ನು ವೃದ್ಧಿಸುವುದು ಹೂಡಿಕೆಯ ಉದ್ದೇಶ.

ಭವಿಷ್ಯದ ಕಾರ್ಯಪಡೆಯನ್ನು ಸಜ್ಜುಗೊಳಿಸಲು ಯುವ ಪೀಳಿಗೆಗೆ ತರಬೇತಿ ನೀಡುವುದು ಉದ್ದೇಶಿತ ಹೂಡಿಕೆಯ ಗುರಿಯಾಗಿದೆ ಎಂದು ಕಾರ್ಮಿಕ ಇಲಾಖೆ ಪ್ರಕಟಿಸಿದೆ.

ಕೊರೊನಾ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯು ಕೇವಲ ಕಾರ್ಮಿಕ ವಲಯದ ಮೇಲಷ್ಟೇ ಅಲ್ಲ, ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ, ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದೆ.

ಈ ಬೃಹತ್ ಕಾರ್ಯಕ್ರಮದಡಿ ಉದ್ಯೋಗ ಮತ್ತು ತರಬೇತಿ ಇಲಾಖೆಯು ಹೆಚ್ಚಿನ ತರಬೇತಿ ಸಂಪನ್ಮೂಲ ಒದಗಿಸಲಿದೆ. ಕೌಶಲ ವೃದ್ಧಿ, ಹೊಸ ಅನ್ವೇಷಣೆ, ನೋಂದಾಯಿತ ತರಬೇತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ತರಗತಿ, ಉದ್ಯೋಗ ಸ್ಥಳದಲ್ಲಿನ ತರಬೇತಿ ಕೂಡಾ ಇರಲಿದೆ ಎಂದು ಇಲಾಖೆಯ ಉಪ ಕಾರ್ಯದರ್ಶಿ ಜಾನ್ ಪಲಾಶ್ಚ್ ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು