ಶನಿವಾರ, ಜನವರಿ 23, 2021
21 °C

ಅಮೆರಿಕ: ಮುಂಬೈ ದಾಳಿಯ ಆರೋಪಿ ರಾಣಾಗೆ ಜಾಮೀನು ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಮುಂಬೈ ಭಯೋತ್ಪಾದನಾ ದಾಳಿಯ (2008) ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾಗೆ ಜಾಮೀನು ನೀಡಲು ಅಮೆರಿಕದ ನ್ಯಾಯಾಲಯ ನಿರಾಕರಿಸಿದೆ.

ಪಾಕಿಸ್ತಾನಿ–ಅಮೆರಿಕನ್‌ ಹಾಗೂ ಎಲ್‌ಇಟಿ ಭಯೋತ್ಪಾದಕನಾಗಿರುವ ಡೇವಿಡ್ ಕೊಲ್ಮೆನ್ ಹೆಡ್ಲಿಯ ಬಾಲ್ಯದ ಗೆಳೆಯ ರಾಣಾನನ್ನು ಭಾರತದ ಮನವಿ ಮೇರೆಗೆ ಜೂನ್‌ 10ರಂದು ಲಾಸ್‌ ಏಜಂಲೀಸ್‌ನಲ್ಲಿ ಪುನಃ ಬಂಧಿಸಲಾಗಿತ್ತು.

ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಅಮರಿಕದಲ್ಲಿ ಬಂಧಿತನಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲಿ 35 ವರ್ಷಗಳ ಶಿಕ್ಷೆಗೆ ಒಳಗಾಗಿದ್ದಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು