ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಭಾರತಕ್ಕೆ ₹ 740 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿ– ಅಮೆರಿಕ

Last Updated 29 ಏಪ್ರಿಲ್ 2021, 6:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್‌–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ₹ 740 ಕೋಟಿ ಮೌಲ್ಯದ (100 ದಶಲಕ್ಷ ಡಾಲರ್‌) ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುವುದು. ಈ ಪೈಕಿ ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ವಿಮಾನ ಭಾರತದತ್ತ ಪ್ರಯಾಣ ಬೆಳಸಿದೆ ಎಂದು ಶ್ವೇತಭವನ ತಿಳಿಸಿದೆ.

ವಿಶ್ವದ ಬೃಹತ್‌ ಯುದ್ಧವಿಮಾನವು ಟ್ರಾವಿಸ್‌ ವಾಯುನೆಲೆಯಿಂದ ಪ್ರಯಾಣ ಆರಂಭಿಸಿದೆ ಎಂದು ಯುಎಸ್‌ ಏಜೆನ್ಸಿ ಫಾರ್‌ ಇಂಟರ್‌ನ್ಯಾಷನಲ್‌ ಡೆವಲೆಪ್‌ಮೆಂಟ್‌ ಹೇಳಿದೆ.

ಈ ಪರಿಹಾರ ಸಾಮಗ್ರಿಗಳನ್ನು ಕ್ಯಾಲಿಫೋರ್ನಿಯಾ ರಾಜ್ಯ ನೀಡಿದೆ. 440 ಆಮ್ಲಜನಕ ಸಿಲಿಂಡರ್‌ಗಳು, ನಿಯಂತ್ರಕಗಳು, 9,60,000 ರ‍್ಯಾಪಿಡ್‌ ಡಯಾಗ್ನೊಸ್ಟಿಕ್‌ ಟೆಸ್ಟ್‌ ಕಿಟ್‌ಗಳು, 1 ಲಕ್ಷ ಎನ್‌–95 ಮಾಸ್ಕ್‌ಗಳನ್ನು ಈ ಮೊದಲ ವಿಮಾನ ಹೊತ್ತೊಯ್ದಿದೆ ಎಂದು ಸಂಸ್ಥೆ ತಿಳಿಸಿದೆ.

‘ಬರುವ ದಿನಗಳಲ್ಲಿ ಆಕ್ಸಿಜನ್‌ ಜನರೇಶನ್ ಯುನಿಟ್‌ (ಪಿಎಸ್‌ಎ ಸಿಸ್ಟಂಸ್‌), 1.5 ಕೋಟಿ ಎನ್‌–95 ಮಾಸ್ಕ್‌ಗಳು ಸೇರಿದಂತೆ ಇತರ ಸಾಮಗ್ರಿಗಳನ್ನು ಭಾರತಕ್ಕೆ ನೀಡಲಾಗುತ್ತದೆ’ ಎಂದೂ ಶ್ವೇತಭವನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT