ಶುಕ್ರವಾರ, ಸೆಪ್ಟೆಂಬರ್ 30, 2022
26 °C

ಅಮೆರಿಕವು ಭಾರತದೊಂದಿಗೆ ನಿಕಟ ರಕ್ಷಣಾ ಸಂಬಂಧ ಹೊಂದಿದೆ: ಪ್ಯಾಟ್ರಿಕ್‌ ರೈಡರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ರಷ್ಯಾ, ಭಾರತ ಹಾಗೂ ಚೀನಾದೊಂದಿಗೆ ಇತ್ತೀಚಿನ ಮಿಲಿಟರಿ ಸಮರಾಭ್ಯಾಸ ಕುರಿತ ಪ್ರಶ್ನೆಗಳನ್ನು ತಳ್ಳಿ ಹಾಕಿರುವ ಅಮೆರಿಕದ ರಕ್ಷಣಾ ಸಚಿವಾಲಯ, ‘ಭಾರತದೊಂದಿಗೆ ಅಮೆರಿಕ ನಿಕಟ ರಕ್ಷಣಾ ಸಂಬಂಧವನ್ನು ಹೊಂದಿದೆ’ ಎಂದು ಮಂಗಳವಾರ ಹೇಳಿದೆ.

‘ಭಾರತವು ಸಾರ್ವಭೌಮ ದೇಶ. ಯಾರೊಂದಿಗೆ ಸಮರಾಭ್ಯಾಸಕ್ಕೆ ಹೋಗಬೇಕು ಎಂಬುದಾಗಿ ಭಾರತವೇ ನಿರ್ಧರಿಸಲಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಬ್ರಿಗ್‌ ಜೆನ್‌ ಪ್ಯಾಟ್ರಿಕ್‌ ರೈಡರ್‌ ಹೇಳಿದ್ದಾರೆ.

‘ಭಾರತ ನಮ್ಮ ಪ್ರಮುಖ ಪಾಲುದಾರ ರಾಷ್ಟ್ರ’ ಎಂದೂ ವಕ್ತಾರರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.