ಮುಖ್ಯಮಂತ್ರಿ ಹೇಳಿಕೆ ಹುಚ್ಚುತನದ ಪರಮಾವಧಿ: ಬಿ.ಎಸ್‌.ಯಡಿಯೂರಪ್ಪ ಅಸಮಾಧಾನ

7
ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಅಸಮಾಧಾನ

ಮುಖ್ಯಮಂತ್ರಿ ಹೇಳಿಕೆ ಹುಚ್ಚುತನದ ಪರಮಾವಧಿ: ಬಿ.ಎಸ್‌.ಯಡಿಯೂರಪ್ಪ ಅಸಮಾಧಾನ

Published:
Updated:
Prajavani

ಚಿಕ್ಕಬಳ್ಳಾಪುರ: ‘ನನ್ನ ಪಾಡಿಗೆ ನಾನು ಬರಗಾಲ ವೀಕ್ಷಣೆ ಮಾಡುತ್ತಿದ್ದೇನೆ. ನಾವು ಯಾವುದೇ ಆಪರೇಷನ್‌ ಕಮಲಕ್ಕೆ ಕೈ ಹಾಕಿಲ್ಲ. ಆದರೆ ನಾನು ಶಾಸಕರೊಬ್ಬರಿಗೆ ಆಮಿಷ ಒಡ್ಡಿದ್ದೇನೆ ಎಂಬ ಕುಮಾರಸ್ವಾಮಿ ಹೇಳಿಕೆ ಹುಚ್ಚುತನದ ಪರಮಾವಧಿ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇನ್ನಾದರೂ ಬೇಜವಾಬ್ದಾರಿ ಹೇಳಿಕೆ ನೀಡುವುದು ನಿಲ್ಲಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಜಿಲ್ಲೆಯಲ್ಲಿ ಶುಕ್ರವಾರ ಬರ ಪರಿಸ್ಥಿತಿ ಅವಲೋಕಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಪಾಡಿಗೆ ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ನೀವು ಎರಡು ಪಕ್ಷದವರು ಕೆಲಸ ಮಾಡಿ ಎಂದರೆ ಕಾಂಗ್ರೆಸ್‌ನವರು, ಜೆಡಿಎಸ್‌ನವರು ಬಡಿದಾಡಿಕೊಂಡು ಅಭಿವೃದ್ಧಿ ಕಾರ್ಯ ಮಾಡದೆ ಕಾಲಹರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಯಾರೋ ಕಾಂಗ್ರೆಸ್ ಕೆಲ ಶಾಸಕರು ಮುನಿಸಿಕೊಂಡು ಹೋದರೆ ಅದಕ್ಕೆ ನಾನು ಜವಾಬ್ದಾರನೇ? ಅವರನ್ನು ವಾಪಸ್‌ ಕರೆತರುವುದು ಅವರ ಜವಾಬ್ದಾರಿ. ನನಗೂ ಅದಕ್ಕೂ ಏನು ಸಂಬಂಧ’ ಎಂದು ಪ್ರಶ್ನಿಸಿದರು.

‘ಇಡೀ ರಾಜ್ಯದಾದ್ಯಂತ ಭೀಕರ ಬರಗಾಲ, ಕುಡಿಯುವ ನೀರಿನ ಹಾಹಾಕಾರವಿದೆ. ಜನ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವ ಸಂದರ್ಭದಲ್ಲಿ ಈ ಸರ್ಕಾರ ತುಘಲಕ್ ದರ್ಬಾರ್‌ ನಡೆಸಿಕೊಂಡು ಮನೆಯಲ್ಲಿದೆ. ಸರ್ಕಾರ ಜನರ ಪಾಲಿಗೆ ಇದ್ದೂ ಸತ್ತಂತಿದೆ. ವಿಚಿತ್ರ ಸನ್ನಿವೇಶದಲ್ಲಿ ರಾಜ್ಯದ ರೈತರು ಬದುಕುತ್ತಿದ್ದಾರೆ. ಇದನ್ನು ನೋಡಿಕೊಂಡು ಹೋಗೋಣ ಎಂದು ನಾವು ಪ್ರವಾಸ ಕೈಗೊಂಡಿದ್ದೇವೆ’ ಎಂದರು.

‘ಪ್ರಿಯಾಂಕಾ ಗಾಂಧಿ ಅವರು ರಾಜಕೀಯ ಪ್ರವೇಶದಿಂದ ಏನೂ ಬದಲಾವಣೆ ಆಗುವುದಿಲ್ಲ. ಚುನಾವಣೆ ಫಲಿತಾಂಶ ಬಂದ ಬಳಿಕ ಅದು ತಿಳಿಯಲಿದೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಬಹುಮತ ಪಡೆದು, ನರೇಂದ್ರ ಮೋದಿ ಅವರು ಪುನಃ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ 22 ಲೋಕಸಭೆ ಸ್ಥಾನಗಳನ್ನು ಗೆಲ್ಲಿಸುವುದು ನನ್ನ ಜವಾಬ್ದಾರಿ. ಆ ಕಡೆ ಗಮನ ಕೊಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !