ಬಿಜೆಪಿ ಸಂಸದರಿಗೆ ₹ 6000 ಮೊತ್ತದ ಡಿಡಿ; ಕೋನರೆಡ್ಡಿ

7
ಹುಬ್ಬಳ್ಳಿಯಲ್ಲಿ ಫೆ.17ರಂದು ನಡೆಯಲಿರುವ ಜೆಡಿಎಸ್‌ ರೈತ ಸಮಾವೇಶದಿಂದ ಡಿಡಿ ರವಾನೆ

ಬಿಜೆಪಿ ಸಂಸದರಿಗೆ ₹ 6000 ಮೊತ್ತದ ಡಿಡಿ; ಕೋನರೆಡ್ಡಿ

Published:
Updated:

ವಿಜಯಪುರ: ‘ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರೈತರಿಗೆ ಘೋಷಿಸಿದ ವಾರ್ಷಿಕ ನೆರವಿನ ಮೊತ್ತದ ಯೋಜನೆ ವಿರೋಧಿಸಿ, ರಾಜ್ಯದ ಬಿಜೆಪಿ ಸಂಸದರಿಗೆ ತಲಾ ₹6000 ಮೊತ್ತದ ಡಿಡಿಯನ್ನು ಪ್ರತಿಭಟನಾರ್ಥವಾಗಿ ಕಳುಹಿಸಿಕೊಡಲಾಗುವುದು’ ಎಂದು ಜೆಡಿಎಸ್‌ ಮುಖಂಡ, ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ ತಿಳಿಸಿದರು.

‘ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇರೋ ತಾಕತ್ತು ಬೇರೆ ಇನ್ಯಾರಿಗೂ ಇಲ್ಲ. ಬಿಜೆಪಿ ನಾಯಕರಿಗೆ ಕಳಕಳಿ ಇದ್ದಿದ್ದರೆ ಬಜೆಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಸಡ್ಡು ಹೊಡೆಯುವಂತೆ ರೈತರ ₹ 3 ಲಕ್ಷ ಮೊತ್ತದ ಸಾಲವನ್ನು ಮನ್ನಾ ಮಾಡಬೇಕಿತ್ತು’ ಎಂದು ಭಾನುವಾರ ಸಂಜೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಹುಬ್ಬಳ್ಳಿಯಲ್ಲಿ ಫೆ.17ರಂದು ಜೆಡಿಎಸ್‌ ರೈತ ಸಮಾವೇಶ ನಡೆಸಲಿದೆ. ಈ ಸಂದರ್ಭವೇ ಪಕ್ಷದ ರೈತ ಕಾರ್ಯಕರ್ತರ ಮೂಲಕವೇ ಬಿಜೆಪಿ ಸಂಸದರಿಗೆ ಡಿಡಿ ರವಾನಿಸಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರ ಅನ್ಯಾಯ ಎಸಗುತ್ತಿದೆ. ಬರ, ನದಿ, ಜಲ ವಿವಾದಗಳಲ್ಲಿ ಮಲತಾಯಿ ಮಕ್ಕಳಂತೆ ನಮ್ಮನ್ನು ನೋಡುತ್ತಿದೆ. ರಾಜ್ಯ ಬಿಜೆಪಿ ಮೂರು ಭಾಗವಾಗಿದೆ. ಆದರೂ ಅಧಿಕಾರದ ಹಪಹಪಿತನಕ್ಕಾಗಿ ನಿತ್ಯವೂ ಒಬ್ಬೊಬ್ಬರು, ಒಂದೊಂದು ಹೇಳಿಕೆ ನೀಡಿಕೊಂಡು, ತಮ್ಮ ಕರ್ತವ್ಯವನ್ನೇ ಮರೆತು, ರಾಜ್ಯ ಸರ್ಕಾರ ಪತನದ ಕನಸಿನಲ್ಲಿ ಓಡಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !