ಗುರುವಾರ , ಮೇ 19, 2022
24 °C

ಕೃಷಿ ಆಧಾರಿತ ಕೈಗಾರಿಕೆಗಳಿಂದ ರೈತರ ಬದುಕು ಹಸನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ(ಕಂಟೆಪ್ಪ ಮಾಸ್ತರ್ ಕೋಡ್ಲಿ ವೇದಿಕೆ): ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವುಂದರಿಂದ ಮಾತ್ರ ರೈತರ ಬದುಕು ಹಸನಾಗಲಿದೆ ಎಂದು ಉದ್ಯಮಿ ಹಾಗೂ ಪ್ರಗತಿಪರ ರೈತ ಬಾಬುರಾವ್ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.ಅವರು 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿಂಚೋಳಿ ಅಂದು ಇಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸುಣ್ಣದ ಕಲ್ಲಿನ ನಿಕ್ಷೇಪ ದೊರೆಯುವ ಸ್ಥಳದಲ್ಲಿ ಸಿಮೆಂಟ್ ಉದ್ದಿಮೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದಕ್ಕೆ ದಶಕದ ಹಿಂದೆಯೇ ವಿರೋಧ ವ್ಯಕ್ತಪಡಿಸಿದರು ಕೂಡ ಅಂದಿನ ಸರ್ಕಾರದ ನೀತಿಗಳಿಂದ ತಡೆಯಲು ಸಾಧ್ಯವಾಗಿಲ್ಲ ಎಂದರು.ಚಿಂಚೋಳಿ ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆ ಕುರಿತು ಮಾತನಾಡಿದ ಡಾ. ಶ್ರೀಶೈಲ್ ನಾಗರಾಳ್ ಅವರು ತಾಲ್ಲೂಕಿಗೆ ಮೂರುವರೆ ಸಾವಿರ ವರ್ಷಗಳ ಇತಿಹಾಸವಿದೆ ಎಂದರು. ಕೃಷಿಯಿಂದ ಕೈಗಾರಿಕೆಯತ್ತ ಚಿಂಚೋಳಿ ಕುರಿತು ಪತ್ರಕರ್ತ ಜಗನ್ನಥ ಶೇರಿಕಾರ ಮಾತನಾಡಿ ತಾಲ್ಲೂಕಿನಲ್ಲಿ ತಲೆ ಎತ್ತುತ್ತಿರುವ ಸಕ್ಕರೆ ಹಾಗೂ ಸಿಮೆಂಟ್ ಉದ್ದಿಮೆಗಳ ಸಾಧಕ ಬಾಧಕ ವಿವರಿಸಿದರು.ಚಿಂಚೋಳಿ ತಾಲ್ಲೂಕಿನ ಸಾಹಿತ್ಯಿಕ ಹಿನ್ನೆಲೆಯನ್ನು ಡಾ. ಈಶ್ವರಯ್ಯ ಕೊಡಾಂಬಲ್ ಪರಿಚಯಿಸಿದರು.ಕಸಾಪ ಮಾಜಿ ಅಧ್ಯಕ್ಷ ಅಶೋಕ ಪಾಟೀಲ್ ಆಶಯ ಭಾಷಣ ಮಾಡಿದರು. ದೇವೇಂದ್ರ ಪ್ಪ ಹೋಳ್ಕರ್ ಸ್ವಾತಿಸಿದರು. ಅಮೃತಪ್ಪ ಕೆರಳ್ಳಿ ನಿರೂಪಿಸಿದರು. ರೇವಣಸಿದ್ದಯ್ಯ ನರನಾಳ ವಂದಿಸಿದರು.ಸಾಹಿತ್ಯ ಗೋಷ್ಠಿ: ನಿಡಗುಂದಾದ ಕರುಣೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ವಚನ ಸಾಹಿತ್ಯ -ಡಾ. ಸಂಜಯ ಮಾಕಲ್, ದಾಸ ಸಾಹಿತ್ಯ -ವಿಶ್ವನಾಥ ಹೊಸಮನಿ, ಜನಪದ ಸಾಹಿತ್ಯ -ಗುಂಡಣ್ಣ ಡಿಗ್ಗಿ ಅವರು ಮಾತನಾಡಿದರು. ಡಾ. ಶಾಂತವೀರ ಸುಂಕದ್ ಆಶಯ ಭಾಷಣ ಮಾಡಿದರು. ಡಾ.ವಿಜಯಲಕ್ಷ್ಮೀ ಕೋಸಗಿ ಅಧ್ಯಕ್ಷತೆ ವಹಿಸಿದ್ದರು. ಗುರುರಾಜ ಅಗ್ನಿಹೋತ್ರಿ ಸ್ವಾಗತಿಸಿದರು, ಜಯಪ್ಪ ಚಾಪಲ್ ನಿರೂಪಿಸಿದರು. ಕಾಶಿನಾಥ ಹುಣಜೆ ವಂದಿಸಿದರು.ಕವಿಗೋಷ್ಠಿ: ಕವಿಗಳಾದ ಚಂದ್ರಪ್ಪ ಮಾಸ್ತರ್, ಬಸವರಾಜ ಲೊಡ್ಡನೋರ್, ಇಸ್ಮಾಯಿಲ್ ಟೇಲರ್, ಸುನಿತಾ ಉಡಮನಳ್ಳಿ, ಮಾರುತಿ ಗಂಜಗಿರಿ, ನರಸಪ್ಪ ಚಿನ್ನಕಟ್ಟಿ, ರಮೇಶ ಪಿ, ಬಸಮ್ಮ ಪಟಪಳ್ಳಿ, ಗುರುಲಿಂಗಪ್ಪ ಹಾಲಳ್ಳಿ, ಬಾಬುರಾವ್ ಮೇಲ್ಕೇರಿ, ದೇವಾನಂದ ಸಾವಳಗಿ, ಚಂದ್ರಕಾಂತ ಐನಾಪೂರ ಕವನ ವಾಚನ ಮಾಡಿದರು. ಡಾ.ವಿಕ್ರಮ ವಿಸಾಜಿ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಮಚಂದ್ರ ಗಣಾಪೂರ ಆಶಯ ಭಾಷಣ ಮಾಡಿದರು. ವಿಜಯಕುಮಾರ ತೇಗಲತಿಪ್ಪಿ ಇದ್ದರು. ಶಾಂತವೀರ ಸ್ವಾಗತಿಸಿದರು. ಹುಚ್ಚಪ್ಪಯ್ಯ ನಿರೂಪಿಸಿದರು. ಜಗನ್ನಾಥರಾವ್ ಬೆಡಕಪಳ್ಳಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.